×
Ad

ಅತ್ಯಂತ ಹಿರಿಯ ಪಾಕ್ ಕ್ರಿಕೆಟಿಗ ವಝೀರ್ ಮುಹಮ್ಮದ್ ನಿಧನ

Update: 2025-10-13 22:16 IST

ವಝೀರ್ ಮುಹಮ್ಮದ್ | Photo Credit : NDTV

ಬರ್ಮಿಂಗ್‌ಹ್ಯಾಮ್, ಅ. 13: ಪಾಕಿಸ್ತಾನದ ಅತ್ಯಂತ ಹಿರಿಯ ಕ್ರಿಕೆಟಿಗ ವಝೀರ್ ಮುಹಮ್ಮದ್ ಸೋಮವಾರ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.

ಟೆಸ್ಟ್ ಆಟಗಾರರಾದ ಹನೀಫ್, ಮುಷ್ತಾಕ್ ಮತ್ತು ಸಾದಿಕ್ ಮುಹಮ್ಮದ್‌ರ ಅಣ್ಣ ನಾಗಿದ್ದ ವಝೀರ್ 1952 ಮತ್ತು 59ರ ನಡುವೆ 20 ಟೆಸ್ಟ್‌ಗಳನ್ನು ಆಡಿದ್ದರು. ಪಾಕಿಸ್ತಾನವು ತನ್ನ ಮೊದಲ ಟೆಸ್ಟ್ ಸರಣಿಯನ್ನು 1952ರಲ್ಲಿ ಆಡಿತ್ತು. ವಝೀರ್ ಆ ತಂಡದ ಬದುಕುಳಿದಿರುವ ಅತ್ಯಂತ ಹಿರಿಯ ಆಟಗಾರರಾಗಿದ್ದರು.

ಅವರು ಪ್ರಸಿದ್ಧ ಮುಹಮ್ಮದ್ ಸಹೋದರರ ಕುಟುಂಬದ ಹಿರಿಯಣ್ಣನಾಗಿದ್ದರು. ನಿವೃತ್ತಿಯ ಬಳಿಕ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಸಲಹೆಗಾರರೂ ಆಗಿದ್ದರು. ಬಳಿಕ ಅವರು ಬ್ರಿಟನ್‌ಗೆ ವಲಸೆ ಹೋದರು.

ಅವರು 1957-58ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಪಂದ್ಯದಲ್ಲಿ 189 ರನ್‌ಗಳ ಸುದೀರ್ಘ ಇನಿಂಗ್ಸೊಂದನ್ನು ಕಟ್ಟಿದ್ದರು. ಆ ಪಂದ್ಯವನ್ನು ಪಾಕಿಸ್ತಾನ ಗೆದ್ದಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News