×
Ad

ಭಾರತೀಯ ತಾರಾ ಕ್ರಿಕೆಟಿಗರಿಂದ ಬಹಿಷ್ಕಾರ: ಭಾರತ ಮತ್ತು ಪಾಕಿಸ್ತಾನ ನಡುವಿನ ಲೆಜೆಂಡ್ಸ್ ಪಂದ್ಯ ರದ್ದುಗೊಳಿಸಿದ WCL

Update: 2025-07-20 12:22 IST

Image Credit: X/@WclLeague

ಬರ್ಮಿಂಗ್ ಹ್ಯಾಮ್: ಎಪ್ರಿಲ್ ನಲ್ಲಿ ನಡೆದ ಪಹಲ್ಗಾಮ್ ದಾಳಿಯನ್ನು ಉಲ್ಲೇಖಿಸಿ ಶಿಖರ್ ಧವನ್ ರಂತಹ ಭಾರತೀಯ ಹಿರಿಯ ತಾರಾ ಕ್ರಿಕೆಟಿಗರು ಭಾರತ ಮತ್ತು ಪಾಕಿಸ್ತಾನದ ನಡುವೆ ಇಂದು (ರವಿವಾರ) ನಡೆಯಬೇಕಿದ್ದ ಪಂದ್ಯದಲ್ಲಿ ಆಟವಾಡಲು ನಿರಾಕರಿಸಿದ್ದರಿಂದ, ಹಿರಿಯ ಕ್ರಿಕೆಟಿಗರ ವಿಶ್ವ ಚಾಂಪಿಯನ್ ಶಿಪ್ ಆಪ್ ಲೆಜೆಂಡ್ಸ್ ನ ಪಂದ್ಯವನ್ನು ರದ್ದುಗೊಳಿಸಲಾಗಿದೆ.

ಈ ಚಾಂಪಿಯನ್ ಶಿಪ್ ನ ಎರಡನೆ ಋತುವಿನ ಪಂದ್ಯಗಳು ಜೂನ್ 18ರಂದು ಎಜ್ಬಾಸ್ಟನ್ ನಲ್ಲಿ ಪ್ರಾರಂಭಗೊಂಡಿದ್ದವು ಹಾಗೂ ಆಗಸ್ಟ್ 2ರಂದು ಫೈನಲ್ ಪಂದ್ಯ ನಿಗದಿಯಾಗಿದೆ. ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಸುರೇಶ್ ರೈನಾ, ರಾಬಿನ್ ಉತ್ತಪ್ಪ, ವರುಣ್ ಆ್ಯರನ್ ಸೇರಿದಂತೆ ಹಲವು ಹಿರಿಯ ಆಟಗಾರರನ್ನು ಹೊಂದಿರುವ ಇಂಡಿಯಾ ಲೆಜೆಂಡ್ಸ್ ತಂಡಕ್ಕೆ ವಿಶ್ವ್ ಕಪ್ ವಿಜೇತ ತಂಡದ ಆಟಗಾರ ಯುವರಾಜ್ ಸಿಂಗ್ ನಾಯಕರಾಗಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪ್ರಕಟನೆಯೊಂದನ್ನು ಹಂಚಿಕೊಂಡಿರುವ ವರ್ಲ್ಡ್ ಕ್ರಿಕೆಟ್ ಲೀಗ್ ಸಂಘಟಕರು, “ನಾವು ಈ ಪಂದ್ಯವನ್ನು ಆಯೋಜಿಸುವುದರ ಹಿಂದಿದ್ದ ಉದ್ದೇಶ ಹಳೆಯ ಸುಮಧುರ ನೆನಪುಗಳನ್ನು ಮರುಸೃಷ್ಟಿಸಲಾಗಿತ್ತು” ಎಂದು ಹೇಳಿದೆ. ಇದರೊಂದಿಗೆ, ಈ ಪಂದ್ಯದ ರದ್ದತಿ ನಿರ್ಧಾರಕ್ಕೆ ಕಾರಣವಾದ ವಿಷಯಗಳ ಕುರಿತು ವಿಸ್ತೃತ ವಿವರಣೆ ನೀಡಿದೆ.

“ಈ ವರ್ಷ ಪಾಕಿಸ್ತಾನ ಹಾಕಿ ತಂಡವು ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿದೆ ಹಾಗೂ ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ವಾಲಿಬಾಲ್ ಅಲ್ಲದೆ ಇನ್ನೂ ಕೆಲವು ಕ್ರೀಡೆಗಳ ಪಂದ್ಯಗಳು ನಡೆದಿವೆ ಎಂಬ ಸುದ್ದಿ ತಿಳಿದ ನಂತರ, ನಾವು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ವರ್ಲ್ಡ್ ಚಾಂಪಿಯನ್ ಲೀಗ್ ಪಂದ್ಯದ ಯೋಜನೆಯೊಂದಿಗೆ ಮುಂದುವರಿಯಲು ನಿರ್ಧರಿಸಿದೆವು” ಎಂದು ಪ್ರಕಟನೆಯಲ್ಲಿ ತಿಳಿಸಿದೆ.

ಕಳೆದ ವರ್ಷ ನಡೆದ ಆರು ಹಿರಿಯ ಕ್ರಿಕೆಟಿಗರ ತಂಡಗಳು ಭಾಗವಹಿಸಿರುವ ಈ ಕ್ರೀಡಾಕೂಟದ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ತಂಡವನ್ನು ಐದು ವಿಕೆಟ್ ಗಳಿಂದ ಮಣಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News