×
Ad

ಆಸೀಸ್ ವಿರುದ್ಧ ಪಂದ್ಯದ ವೇಳೆ ಶಿವಂ ದುಬೆ ವಿರುದ್ಧ ಎಸ್‌ಕೆವೈ ಗರಂ ಆದದ್ದೇಕೆ?

Update: 2025-11-07 08:29 IST

PC: x.com/CricketNDTV

ಹೊಸದಿಲ್ಲಿ: ಮೈದಾನದಲ್ಲಿ ಸದಾ ತಾಳ್ಮೆ ಮತ್ತು ಪ್ರಸನ್ನತೆಗೆ ಹೆಸರಾಗಿರುವ ಭಾರತ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಗುರುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶಿವಂ ದುಭೆ ಮೇಲೆ ತಾಳ್ಮೆ ಕಳೆದುಕೊಂಡ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

ಕ್ವೀನ್ಸ್ ಲೆಂಡ್ ನ ಕೆರ್ರಾರಾ ಓವಲ್ ಮೈದಾನದಲ್ಲಿ ನಡೆದ ಪಂದ್ಯದ 12ನೇ ಓವರ್ ನ ಕೊನೆಯ ಎಸೆತದಲ್ಲಿ ಎಸ್ ಕೆವೈ ತಾಳ್ಮೆ ಕಳೆದುಕೊಂಡು ಸಹ ಆಟಗಾರರನ್ನು ತರಾಟೆಗೆ ತೆಗೆದುಕೊಂಡರು. ಸರಣಿ ಮುನ್ನಡೆಗಾಗಿ ಗೆಲ್ಲಲೇಬೇಕಾದ ಪಂದ್ಯದಲ್ಲಿ ಅಂತಿಮವಾಗಿ ಭಾರತ 48 ರನ್ ಗಳ ಗೆಲುವು ಸಾಧಿಸಿತು.

ಆಸ್ಟ್ರೇಲಿಯಾ ತಂಡ 168 ರನ್ ಗಳನ್ನು ಬೆನ್ನಟ್ಟುವ ವೇಳೆ 12ನೇ ಓವರ್ ನಲ್ಲಿ ಶಿವಂ ದುಭೆ ಟಿಮ್ ಡೇವಿಡ್ ಅವರ ವಿಕೆಟ್ ಪಡೆದರು. ಹೊಸ ಬ್ಯಾಟ್ಸ್ಮನ್ ಮಾಕ್ರ್ಯೂಸ್ ಸ್ಟೈನಿಸ್ ಮೇಲೆ ಎರಡು ಡಾಟ್ ಬಾಲ್ ಮೂಲಕ ಒತ್ತಡ ಹೇರಿದರು. ಆದರೆ ಅಂತಿಮ ಎಸೆತದಲ್ಲಿ ಬೌಲರ್ ಪ್ರಮಾದ ಎಸಗಿದರು. ಆಫ್ ಸ್ಟಂಪ್ ಆಚೆಗೆ ಶಾರ್ಟ್ ಡೆಲಿವರಿ ಬೌಲಿಂಗ್ ಮಾಡಿದರು. ಇದರ ಪ್ರಯೋಜನ ಪಡೆದ ಸ್ಟೈನಿಸ್ ಬ್ಯಾಕ್ ವರ್ಡ್ ಪಾಯಿಂಟ್ನಲ್ಲಿ ಚೆಂಡನ್ನು ಬೌಂಡರಿಗೆ ಅಟ್ಟಿದರು.

ಚೆಂಡು ಬೌಂಡರಿ ಗೆರೆ ದಾಟುತ್ತಿದ್ದಂತೆ ಎಸ್ಕೆವೈ ಹತಾಶೆಯಿಂದ ದುಭೆಯತ್ತ ತಿರುಗಿ ಗೊಣಗುತ್ತಿರುವುದು ಕಂಡುಬಂತು. ಪ್ರಮುಖ ಕ್ಷಣದಲ್ಲಿ ಒತ್ತಡದಿಂದ ಮುಕ್ತಗೊಳಿಸಿದ ಬಗ್ಗೆ ಅಸಮಾಧಾನ ಹೊಂದಿರುವುದು ಸ್ಪಷ್ಟವಾಗಿ ಕಂಡುಬಂತು.

ಆದರೆ ಪಂದ್ಯದ ಉಳಿದ ಭಾರತದಲ್ಲಿ ಭಾರತ ಪ್ರಾಬಲ್ಯ ಮೆರೆದು ಚೇತರಿಸಿಕೊಂಡಿತು. ವಾಷಿಂಗ್ಟನ್ ಸುಂದರ್ ಐದು ಎಸೆತಗಳಲ್ಲಿ ಎದುರಾಳಿಗಳ ಮೂರು ವಿಕೆಟ್ ಕಬಳಿಸಿ ಆಸೀಸ್ ಪತನಕ್ಕೆ ನಾಂದಿ ಹಾಡಿದರು. 12ನೇ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿದ್ದ ಅತಿಥೇಯ ತಂಡ 18.2 ಓವರ್ ಗಳಲ್ಲಿ 119 ರನ್ಗಳಿಗೆ ಆಲೌಟ್ ಆಯಿತು. ತವರು ನೆಲದಲ್ಲಿ ಆಸ್ಟ್ರೇಲಿಯಾದ ಎರಡನೇ ಕನಿಷ್ಠ ಟಿ20 ಮೊತ್ತ ಇದಾಗಿದೆ. ನ್ಯೂಜಿಲೆಂಡ್ ವಿರುದ್ಧ 2022ರಲ್ಲಿ ಸಿಡ್ನಿಯಲ್ಲಿ ಕೇವಲ 111 ರನ್ ಗಳಿಗೆ ಆಸ್ಟ್ರೇಲಿಯಾ ಆಲೌಟ್ ಆಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News