×
Ad

ಮಹಿಳೆಯರ ಏಶ್ಯಕಪ್ | ನಾಳೆ ಫೈನಲ್‌ನಲ್ಲಿ ಭಾರತ -ಶ್ರೀಲಂಕಾ ಮುಖಾಮುಖಿ

Update: 2024-07-27 22:08 IST

PC : PTI 

ಡಾಂಬುಲ್ಲಾ : ಹಾಲಿ ಚಾಂಪಿಯನ್ ಭಾರತವು ರವಿವಾರ ನಡೆಯಲಿರುವ ಮಹಿಳೆಯರ ಏಶ್ಯಕಪ್ ಟಿ20 ಟೂರ್ನಿಯ ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಟೂರ್ನಿಯಲ್ಲಿ ತನ್ನ ಪ್ರಾಬಲ್ಯ ಮುಂದುವರಿಸುವತ್ತ ಚಿತ್ತಹರಿಸಿರುವ ಭಾರತವು ದಾಖಲೆ 8ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

ಭಾರತವು ಪಾಕಿಸ್ತಾನವನ್ನು 7 ವಿಕೆಟ್‌ನಿಂದ ಮಣಿಸಿದ ನಂತರ ಯುಎಇ(78 ರನ್), ನೇಪಾಳ(82 ರನ್) ಹಾಗೂ ಬಾಂಗ್ಲಾದೇಶ(10 ವಿಕೆಟ್)ತಂಡಗಳನ್ನು ಸೋಲಿಸಿತ್ತು.

ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಹಾಗೂ ಬೌಲರ್‌ಗಳು ಸಂಘಟಿತ ಪ್ರದರ್ಶನ ನೀಡಿ ಎದುರಾಳಿಗೆ ಬೆವರಿಳಿಸಿದ್ದಾರೆ. ಓಪನರ್‌ ಗಳಾದ ಸ್ಮತಿ ಮಂಧಾನ ಹಾಗೂ ಶೆಫಾಲಿ ವರ್ಮಾ ಭಾರತಕ್ಕೆ ಭರ್ಜರಿ ಆರಂಭ ಒದಗಿಸುತ್ತಿದ್ದಾರೆ. ಬೌಲಿಂಗ್‌ ನಲ್ಲಿ ದೀಪ್ತಿ ಶರ್ಮಾ ಹಾಗೂ ರೇಣುಕಾ ಸಿಂಗ್ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ.

9 ವಿಕೆಟ್‌ನೊಂದಿಗೆ ದೀಪ್ತಿ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದಿದ್ದಾರೆ. ರೇಣುಕಾ 7 ವಿಕೆಟ್‌ ನೊಂದಿಗೆ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ.

ಮತ್ತೊಂದೆಡೆ ಶ್ರೀಲಂಕಾ ಪ್ರಸಕ್ತ ಟೂರ್ನಿಯಲ್ಲಿ ಅಜೇಯ ದಾಖಲೆ ಹೊಂದಿದೆ. ಮಲೇಶ್ಯ ವಿರುದ್ಧ ಗ್ರೂಪ್ ಹಂತದಲ್ಲಿ 144 ರನ್ ಅಂತರದ ಜಯ ಸಾಧಿಸಿತ್ತು. ನಾಯಕಿ ಚಾಮರಿ ಅಥಪಟ್ಟು 243 ರನ್‌ನಿಂದ ಅಗ್ರ ಸ್ಕೋರರ್ ಆಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News