×
Ad

ಮಹಿಳೆಯರ ಚೆಸ್ ವಿಶ್ವಕಪ್ ಫೈನಲ್ | ಹಂಪಿ, ದಿವ್ಯಾ ಮತ್ತೊಮ್ಮೆ ಡ್ರಾ, ಟೈ-ಬ್ರೇಕರ್‌ ನಲ್ಲಿ ಚಾಂಪಿಯನ್ ನಿರ್ಧಾರ

Update: 2025-07-27 21:58 IST

ಕೊನೆರು ಹಂಪಿ ಹಾಗೂ ದಿವ್ಯಾ ದೇಶಮುಖ್ | PC : X 

ಬಟುಮಿ(ಜಾರ್ಜಿಯಾ), ಜು. 27: ಭಾರತದ ಇಬ್ಬರು ಸ್ಟಾರ್‌ಗಳಾದ ಕೊನೆರು ಹಂಪಿ ಹಾಗೂ ದಿವ್ಯಾ ದೇಶಮುಖ್ ನಡುವಿನ ಬಹು ನಿರೀಕ್ಷಿತ ಫಿಡೆ ಮಹಿಳೆಯರ ಚೆಸ್ ವಿಶ್ವಕಪ್ ಫೈನಲ್‌ ನ 2ನೇ ಗೇಮ್ ಕೂಡ ರವಿವಾರ ಡ್ರಾನಲ್ಲಿ ಕೊನೆಗೊಂಡಿದೆ. ಹೀಗಾಗಿ ಫೈನಲ್ ಪಂದ್ಯದ ವಿಜೇತರನ್ನು ಟೈ-ಬ್ರೇಕರ್‌ನಲ್ಲಿ ನಿರ್ಧರಿಸಲಾಗುತ್ತದೆ. ಟೈ ಬ್ರೇಕರ್ ಪಂದ್ಯವು ಸೋಮವಾರ ನಡೆಯಲಿದೆ. ಮೊದಲ ರ್ಯಾಪಿಡ್ ಪಂದ್ಯದಲ್ಲಿ ಹಂಪಿ ಅವರು ಕಪ್ಪು ಕಾಯಿಯೊಂದಿಗೆ ಆಡಲಿದ್ದಾರೆ.

ರವಿವಾರದ ಪಂದ್ಯದಲ್ಲಿ 38ರ ವಯಸ್ಸಿನ ಕೊನೆರು ಹಂಪಿ ಅವರು 19ರ ವಯಸ್ಸಿ ದಿವ್ಯಾ ವಿರುದ್ಧ ಬಿಳಿ ಕಾಯಿಯೊಂದಿಗೆ ಆಡಿದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಹಂಪಿ ಸಮಯದ ವಿಚಾರದಲ್ಲಿ ಒತ್ತಡಕ್ಕೆ ಸಿಲುಕಿದರೆ, ದಿವ್ಯಾ ಅವರು ಸಮಯದ ವಿಚಾರದಲ್ಲಿ ಮಹತ್ವದ ಮೇಲುಗೈ ಪಡೆದರು.

ವಿಶ್ವದ ನಂ.6ನೇ ಆಟಗಾರ್ತಿ ಹಂಪಿ ಹಾಗೂ ವಿಶ್ವದ ನಂ.18ನೇ ಆಟಗಾರ್ತಿ ದಿವ್ಯಾ ನಡುವೆ ಶನಿವಾರ ನಡೆದಿದ್ದ ಮೊದಲ ಗೇಮ್ ಕೂಡ ಡ್ರಾನಲ್ಲಿ ಕೊನೆಗೊಂಡಿತ್ತು. ಹೀಗಾಗಿ ಹಂಪಿ ಹಾಗೂ ದಿವ್ಯಾ ನಡುವಿನ ಕ್ಲಾಸಿಕಲ್ ಪಂದ್ಯವು 1-1ರಿಂದ ಸಮಬಲಗೊಂಡಿದೆ. ಇಂತಹ ಸಂದರ್ಭದಲ್ಲಿ ವಿಜೇತರನ್ನು ಟೈ-ಬ್ರೇಕರ್ ಮೂಲಕ ನಿರ್ಧರಿಸಲಾಗುತ್ತದೆ. ಟೈ-ಬ್ರೇಕರ್ ಸಾಮಾನ್ಯವಾಗಿ ರ‍್ಯಾಪಿಡ್‌

ಅಥವಾ ಬ್ಲಿಟ್ಜ್ ಗೇಮ್‌ ಗಳ ಸರಣಿಯನ್ನು ಒಳಗೊಂಡಿರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News