2025ರ ಆವೃತ್ತಿಯ ಮಹಿಳೆಯರ ಏಕದಿನ ವಿಶ್ವಕಪ್: ಭಾರತ ತಂಡ ಪ್ರಕಟ
ಶೆಫಾಲಿ ಔಟ್, ರೇಣುಕಾ ವಾಪಸ್
PC : PTI
ಹೊಸದಿಲ್ಲಿ: ಈ ವರ್ಷದ ಸೆಪ್ಟಂಬರ್ 30 ಹಾಗೂ ನವೆಂಬರ್ 2ರ ನಡುವೆ ಸ್ವದೇಶದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್ ಪಂದ್ಯಾವಳಿಗೆ 15 ಸದಸ್ಯರನ್ನು ಒಳಗೊಂಡ ಭಾರತದ ಮಹಿಳಾ ಕ್ರಿಕೆಟ್ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ.
ಭಾರತ ತಂಡವು ಶ್ರೀಲಂಕಾ ತಂಡವನ್ನು ಎದುರಿಸುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.
‘‘ನಮ್ಮಲ್ಲಿ ಪವರ್ ಪ್ಲೇ ವೇಳೆ ರೇಣುಕಾ ಹಾಗೂ ಕ್ರಾಂತಿ, ಸ್ಲಾಗ್ ಓವರ್‌ಗಳಲ್ಲಿ ಶ್ರೀ ಚರಣಿ, ದೀಪ್ತಿ ಹಾಗೂ ರಾಧಾ ಬೌಲಿಂಗ್ ಮಾಡುತ್ತಾರೆ. ಮಧ್ಯಮ ಓವರ್‌ಗಳಲ್ಲಿ ಸ್ನೇಹ ರಾಣಾ ಬೌಲಿಂಗ್ ಮಾಡಲಿದ್ದಾರೆ. ನಾವು ಹೆಚ್ಚು ಬದಲಾವಣೆಗಳನ್ನು ಮಾಡಲು ಬಯಸುವುದಿಲ್ಲ, ಇರುವುದನ್ನೇ ಮುಂದುವರಿಸುತ್ತೇವೆ’’ ಎಂದು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ತಂಡದ ಸಮತೋಲನದ ಬಗ್ಗೆ ಮಾತನಾಡಿದರು.
‘‘ರೇಣುಕಾ ನಮ್ಮ ಪ್ರಮುಖ ಆಟಗಾರ್ತಿಯಾಗಿದ್ದು, ಅವರು ಗಾಯದಿಂದಾಗಿ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಅವರು ಲಭ್ಯರಿದ್ದಾರೆ. ವಿಶ್ವಕಪ್ ಪ್ರಧಾನ ಪಂದ್ಯಾವಳಿಯಾಗಿದ್ದು, ರೇಣುಕಾ ತಂಡದಲ್ಲಿರುವುದು ನಮಗೆ ಖುಷಿ ತಂದಿದೆ’’ ಎಂದು ಆಯ್ಕೆ ಸಮಿತಿಯ ಮುಖ್ಯಸ್ಥೆ ನೀತು ಡೇವಿಡ್ ಹೇಳಿದ್ದಾರೆ.
2025ರ ಆವೃತ್ತಿಯ ಮಹಿಳೆಯರ ಏಕದಿನ ವಿಶ್ವಕಪ್‌ಗೆ ಭಾರತ ತಂಡ:
ಹರ್ಮನ್‌ಪ್ರೀತ್ ಕೌರ್(ನಾಯಕಿ), ಸ್ಮತಿ ಮಂಧಾನ(ಉಪ ನಾಯಕಿ), ಪ್ರತಿಕಾ ರಾವಲ್, ಹರ್ಲೀನ್ ಡೆವೊಲ್, ಜೆಮಿಮಾ ರೊಡ್ರಿಗಸ್, ರಿಚಾ ಘೋಷ್(ವಿಕೆಟ್‌ಕೀಪರ್), ಯಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ಅಮನ್‌ಜೋತ್ ಕೌರ್, ರಾಧಾ ಯಾದವ್, ಸ್ನೇಹ ರಾಣಾ, ಅರುಂಧತಿ ರೆಡ್ಡಿ, ಎನ್.ಶ್ರೀ ಚರಣಿ, ರೇಣುಕಾ ಸಿಂಗ್ ಠಾಕೂರ್, ಕ್ರಾಂತಿ ಗೌಡ್.
ಮೀಸಲು ಆಟಗಾರ್ತಿಯರು: ತೇಜಲ್, ಪ್ರೇಮಾ ರಾವತ್, ಪ್ರಿಯಾ ಮಿಶ್ರಾ, ಉಮಾ ಚೆಟ್ರಿ, ಮಿನ್ನು ಮಣಿ, ಸಯಾಲಿ ಸತ್ಘರೆ.