×
Ad

ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟ

Update: 2025-06-16 22:24 IST

pc : icc

ಹೊಸದಿಲ್ಲಿ: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಪ್ಟಂಬರ್ 30ರಂದು ಆತಿಥೇಯ ಭಾರತ ತಂಡವು ಶ್ರೀಲಂಕಾ ತಂಡವನ್ನು ಎದುರಿಸುವ ಮೂಲಕ 13ನೇ ಆವೃತ್ತಿಯ ಐಸಿಸಿ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಸೋಮವಾರ ವನಿತೆಯರ ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪಂದ್ಯಾವಳಿಯು ಸೆಪ್ಟಂಬರ್ 30ರಿಂದ ನವೆಂಬರ್ 2ರ ತನಕ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿದೆ.

ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಈ ಪ್ರತಿಷ್ಠಿತ 50 ಓವರ್ಗಳ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡವು ಅಕ್ಟೋಬರ್ 1ರಂದು ಇಂದೋರ್ ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಮ್ ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸುವುದರೊಂದಿಗೆ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಆರಂಭಿಸಲಿದೆ.

2022ರ ರನ್ನರ್-ಅಪ್ ಇಂಗ್ಲೆಂಡ್ ತಂಡವು ಬೆಂಗಳೂರಿನಲ್ಲಿ ಅ.3ರಂದು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಅಕ್ಟೋಬರ್ 26ರ ತನಕ ರೌಂಡ್-ರಾಬಿನ್ ಹಂತ ನಡೆಯಲಿದೆ. ಅ.26ರಂದು ಒಂದೇ ದಿನ ಎರಡು ಪಂದ್ಯಗಳು ನಡೆಯುವ ಮೂಲಕ ಲೀಗ್ ಹಂತವು ಮುಕ್ತಾಯವಾಗಲಿದೆ. ಆ ದಿನ ಗುವಾಹಟಿಯಲ್ಲಿ ಇಂಗ್ಲೆಂಡ್ ತಂಡವು ನ್ಯೂಝಿಲ್ಯಾಂಡ್ ತಂಡವನ್ನು, ಭಾರತ ತಂಡವು ಬೆಂಗಳೂರಿನಲ್ಲಿ ಬಾಂಗ್ಲಾದೇಶ ತಂಡವನ್ನು ಮುಖಾಮುಖಿಯಾಗಲಿದೆ.

ಸೆಮಿ ಫೈನಲ್ ಪಂದ್ಯಗಳು ಅಕ್ಟೋಬರ್ 29 ಹಾಗೂ 30ರಂದು ನಡೆಯಲಿದ್ದು, ನವೆಂಬರ್ 2ರಂದು ಫೈನಲ್ ಪಂದ್ಯ ನಡೆಯಲಿದೆ.

ಆಸ್ಟ್ರೇಲಿಯ, ಭಾರತ, ಇಂಗ್ಲೆಂಡ್, ನ್ಯೂಝಿಲ್ಯಾಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಸಿಂಗಲ್ ರೌಂಡ್-ರಾಬಿನ್ ಮಾದರಿಯಲ್ಲಿ ಆಡಲಿದ್ದು, ಪ್ರತೀ ತಂಡಗಳು ಮತ್ತೊಂದು ತಂಡವನ್ನು ಒಮ್ಮೆ ಮಾತ್ರ ಎದುರಿಸಲಿದೆ.

ರೌಂಡ್-ರಾಬಿನ್ ಹಂತದಿಂದ ಅಗ್ರ 4 ತಂಡಗಳು ಸೆಮಿ ಫೈನಲ್ ಗೆ ಪ್ರವೇಶಿಸಲಿವೆ. ಮೊದಲ ಸ್ಥಾನ ಪಡೆದ ತಂಡವು 4ನೇ ಸ್ಥಾನ ಪಡೆದ ತಂಡವನ್ನು, 2ನೇ ಸ್ಥಾನ ಪಡೆದ ತಂಡವು 3ನೇ ಸ್ಥಾನ ಪಡೆದ ತಂಡವನ್ನು ಎದುರಿಸಲಿದೆ.

2 ದೇಶಗಳ ಐದು ನಗರಗಳಾದ: ಬೆಂಗಳೂರು, ವಿಶಾಖಪಟ್ಟಣಂ, ಇಂದೋರ್, ಗುವಾಹಟಿ ಹಾಗೂ ಕೊಲಂಬೊ ಪಂದ್ಯಗಳ ಆತಿಥ್ಯವಹಿಸಲಿವೆ.

ಅ.29ರಂದು ಮೊದಲ ಸೆಮಿ ಫೈನಲ್ ಪಂದ್ಯವು ಕೊಲಂಬೊ ಅಥವಾ ಗುವಾಹಟಿಯಲ್ಲಿ ನಡೆಯಲಿದ್ದು, ಇದು ಪಾಕಿಸ್ತಾನದ ಅರ್ಹತೆಯನ್ನು ಅವಲಂಬಿಸಿದೆ. 2ನೇ ಸೆಮಿ ಫೈನಲ್ ಪಂದ್ಯವು ಬೆಂಗಳೂರಿನಲ್ಲಿ ನಡೆಯುವುದು ದೃಢಪಟ್ಟಿದೆ. ನವೆಂಬರ್ 2ರಂದು ನಿಗದಿಯಾಗಿರುವ ಫೈನಲ್ ಪಂದ್ಯವು ಬೆಂಗಳೂರು ಅಥವಾ ಕೊಲಂಬೊದಲ್ಲಿ ನಡೆಯಲಿದೆ.

ಟೂರ್ನಿಯಲ್ಲಿ ಭಾಗವಹಿಸಲಿರುವ ಒಟ್ಟು 8 ತಂಡಗಳು ಸೆಪ್ಟಂಬರ್ 24ರಿಂದ ತಲಾ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿವೆ. ಭಾರತ ತಂಡವು ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಬೆಂಗಳೂರಿನಲ್ಲಿ ಆಡಲಿದೆ. ಆ ನಂತರ ಗುವಾಹಟಿಯಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಮತ್ತೊಂದು ಪ್ರಾಕ್ಟೀಸ್ ಮ್ಯಾಚ್ ಆಡಲಿದೆ.

2022ರಲ್ಲಿ 7ನೇ ಬಾರಿ ಪ್ರಶಸ್ತಿಯನ್ನು ಜಯಿಸಿ ದಾಖಲೆ ನಿರ್ಮಿಸಿರುವ ಆಸ್ಟ್ರೇಲಿಯ ತಂಡವು ಐಸಿಸಿ ಮಹಿಳೆಯರ ಚಾಂಪಿಯನ್ ಶಿಪ್ ನಲ್ಲಿ ಮತ್ತೊಮ್ಮೆ ಅಗ್ರ ಸ್ಥಾನ ಪಡೆದಿದ್ದು, ಈ ತಂಡವನ್ನು ಇಂಗ್ಲೆಂಡ್, ನ್ಯೂಝಿಲ್ಯಾಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ಆತಿಥೇಯ ಭಾರತ ನೇರವಾಗಿ ಸೇರಿಕೊಂಡಿವೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಎಪ್ರಿಲ್ನಲ್ಲಿ ನಡೆದಿದ್ದ ಕ್ವಾಲಿಫೈಯರ್ನ ಮೂಲಕ ವಿಶ್ವಕಪ್ ನಲ್ಲಿ ಆಡುವ ಅವಕಾಶ ಪಡೆದಿವೆ.

►ಸಂಪೂರ್ಣ ವೇಳಾಪಟ್ಟಿ

ದಿನಾಂಕ ಪಂದ್ಯಗಳು ಸ್ಥಳ ಸಮಯ

ಸೆಪ್ಟಂಬರ್ 30 ಭಾರತ-ಶ್ರೀಲಂಕಾ ಬೆಂಗಳೂರು ಮಧ್ಯಾಹ್ನ 3:00

ಅಕ್ಟೋಬರ್ 1 ಆಸ್ಟ್ರೇಲಿಯ-ನ್ಯೂಝಿಲ್ಯಾಂಡ್ ಇಂದೋರ್ ಮಧ್ಯಾಹ್ನ 3:00

ಅಕ್ಟೋಬರ್ 2 ಬಾಂಗ್ಲಾದೇಶ-ಪಾಕಿಸ್ತಾನ ಕೊಲಂಬೊ ಮಧ್ಯಾಹ್ನ 3:00

ಅಕ್ಟೋಬರ್ 3 ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಬೆಂಗಳೂರು ಮಧ್ಯಾಹ್ನ 3:00

ಅಕ್ಟೋಬರ್ 4 ಆಸ್ಟ್ರೇಲಿಯ-ಶ್ರೀಲಂಕಾ ಕೊಲಂಬೊ ಮಧ್ಯಾಹ್ನ 3:00

ಅಕ್ಟೋಬರ್ 5 ಭಾರತ-ಪಾಕಿಸ್ತಾನ ಕೊಲಂಬೊ ಮಧ್ಯಾಹ್ನ 3:00

ಅಕ್ಟೋಬರ್ 6 ನ್ಯೂಝಿಲ್ಯಾಂಡ್-ದಕ್ಷಿಣ ಆಫ್ರಿಕಾ ಇಂದೋರ್ ಮಧ್ಯಾಹ್ನ 3:00

ಅಕ್ಟೋಬರ್ 7 ಇಂಗ್ಲೆಂಡ್-ಬಾಂಗ್ಲಾದೇಶ ಗುವಾಹಟಿ ಮಧ್ಯಾಹ್ನ 3:00

ಅಕ್ಟೋಬರ್ 8 ಆಸ್ಟ್ರೇಲಿಯ-ಪಾಕಿಸ್ತಾನ ಕೊಲಂಬೊ ಮಧ್ಯಾಹ್ನ 3:00

ಅಕ್ಟೋಬರ್ 9 ಭಾರತ-ದಕ್ಷಿಣ ಆಫ್ರಿಕಾ ವಿಶಾಖಪಟ್ಟಣಂ ಮಧ್ಯಾಹ್ನ 3:00

ಅಕ್ಟೋಬರ್ 10 ನ್ಯೂಝಿಲ್ಯಾಂಡ್-ಬಾಂಗ್ಲಾದೇಶ ವಿಶಾಖಪಟ್ಟಣಂ ಮಧ್ಯಾಹ್ನ 3:00

ಅಕ್ಟೋಬರ್ 11 ಇಂಗ್ಲೆಂಡ್-ಶ್ರೀಲಂಕಾ ಗುವಾಹಟಿ ಮಧ್ಯಾಹ್ನ 3:00

ಅಕ್ಟೋಬರ್ 12 ಭಾರತ-ಆಸ್ಟ್ರೇಲಿಯ ವಿಶಾಖಪಟ್ಟಣಂ ಮಧ್ಯಾಹ್ನ 3:00

ಅಕ್ಟೋಬರ್ 13 ದಕ್ಷಿಣ ಆಫ್ರಿಕಾ-ಬಾಂಗ್ಲಾದೇಶ ವಿಶಾಖಪಟ್ಟಣಂ ಮಧ್ಯಾಹ್ನ 3:00

ಅಕ್ಟೋಬರ್ 14 ನ್ಯೂಝಿಲ್ಯಾಂಡ್-ಶ್ರೀಲಂಕಾ ಕೊಲಂಬೊ ಮಧ್ಯಾಹ್ನ 3:00

ಅಕ್ಟೋಬರ್ 15 ಇಂಗ್ಲೆಂಡ್-ಪಾಕಿಸ್ತಾನ ಕೊಲಂಬೊ ಮಧ್ಯಾಹ್ನ 3:00

ಅಕ್ಟೋಬರ್ 16 ಆಸ್ಟ್ರೇಲಿಯ-ಬಾಂಗ್ಲಾದೇಶ ವಿಶಾಖಪಟ್ಟಣಂ ಮಧ್ಯಾಹ್ನ 3:00

ಅಕ್ಟೋಬರ್ 17 ದಕ್ಷಿಣ ಆಫ್ರಿಕಾ-ಶ್ರೀಲಂಕಾ ಕೊಲಂಬೊ ಮಧ್ಯಾಹ್ನ 3:00

ಅಕ್ಟೋಬರ್ 18 ನ್ಯೂಝಿಲ್ಯಾಂಡ್-ಪಾಕಿಸ್ತಾನ ಕೊಲಂಬೊ ಮಧ್ಯಾಹ್ನ 3:00

ಅಕ್ಟೋಬರ್ 19 ಭಾರತ-ಇಂಗ್ಲೆಂಡ್ ಇಂದೋರ್ ಮಧ್ಯಾಹ್ನ 3:00

ಅಕ್ಟೋಬರ್ 20 ಶ್ರೀಲಂಕಾ-ಬಾಂಗ್ಲಾದೇಶ ಕೊಲಂಬೊ ಮಧ್ಯಾಹ್ನ 3:00

ಅಕ್ಟೋಬರ್ 21 ದಕ್ಷಿಣ ಆಫ್ರಿಕಾ-ಪಾಕಿಸ್ತಾನ ಕೊಲಂಬೊ ಮಧ್ಯಾಹ್ನ 3:00

ಅಕ್ಟೋಬರ್ 22 ಆಸ್ಟ್ರೇಲಿಯ-ಇಂಗ್ಲೆಂಡ್ ಇಂದೋರ್ ಮಧ್ಯಾಹ್ನ 3:00

ಅಕ್ಟೋಬರ್ 23 ಭಾರತ-ನ್ಯೂಝಿಲ್ಯಾಂಡ್ ಗುವಾಹಟಿ ಮಧ್ಯಾಹ್ನ 3:00

ಅಕ್ಟೋಬರ್ 24 ಪಾಕಿಸ್ತಾನ-ಶ್ರೀಲಂಕಾ ಕೊಲಂಬೊ ಮಧ್ಯಾಹ್ನ 3:00

ಅಕ್ಟೋಬರ್ 25 ಆಸ್ಟ್ರೇಲಿಯ-ಶ್ರೀಲಂಕಾ ಇಂದೋರ್ ಮಧ್ಯಾಹ್ನ 3:00

ಅಕ್ಟೋಬರ್ 26 ಇಂಗ್ಲೆಂಡ್-ನ್ಯೂಝಿಲ್ಯಾಂಡ್ ಗುವಾಹಟಿ ಬೆಳಗ್ಗೆ 11:00

ಅಕ್ಟೋಬರ್ 26 ಭಾರತ-ಬಾಂಗ್ಲಾದೇಶ ಬೆಂಗಳೂರು ಮಧ್ಯಾಹ್ನ 3:00

ಅಕ್ಟೋಬರ್ 29 ಮೊದಲ ಸೆಮಿ ಫೈನಲ್ ಗುವಾಹಟಿ/ಕೊಲಂಬೊ ಮಧ್ಯಾಹ್ನ 3:00

ಅಕ್ಟೋಬರ್ 30 ಎರಡನೇ ಸೆಮಿ ಫೈನಲ್ ಬೆಂಗಳೂರು ಮಧ್ಯಾಹ್ನ 3:00

ನವೆಂಬರ್ 2 ಫೈನಲ್ ಪಂದ್ಯ ಕೊಲಂಬೊ/ಬೆಂಗಳೂರು ಮಧ್ಯಾಹ್ನ 3:00

ಸಮಯ: ಭಾರತೀಯ ಕಾಲಮಾನದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News