×
Ad

ಮಹಿಳೆಯರ ವಿಶ್ವಕಪ್ | ನಿಧಾನಗತಿಯ ಬೌಲಿಂಗ್ : ಭಾರತ ತಂಡಕ್ಕೆ ದಂಡ

Update: 2025-10-15 20:44 IST

Photo Credit : @BCCIWomen/x.com 

ಹೊಸದಿಲ್ಲಿ, ಅ.15: ವಿಶಾಖಪಟ್ಟಣದಲ್ಲಿ ರವಿವಾರ ನಡೆದ ಆಸ್ಟ್ರೇಲಿಯ ವಿರುದ್ಧದ ಮಹಿಳೆಯರ ಏಕದಿನ ವಿಶ್ವಕಪ್ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿರುವುದಕ್ಕೆ ಭಾರತೀಯ ಮಹಿಳೆಯರ ಕ್ರಿಕೆಟ್ ತಂಡಕ್ಕೆ ಪಂದ್ಯ ಶುಲ್ಕದಲ್ಲಿ ಶೇ.5ರಷ್ಟು ದಂಡ ವಿಧಿಸಲಾಗಿದೆ.

ಗರಿಷ್ಠ ಮೊತ್ತದ ಸ್ಪರ್ಧೆಯಲ್ಲಿ ಭಾರತ ತಂಡವು 3 ವಿಕೆಟ್‌ಗಳ ಅಂತರದಿಂದ ಸೋತಿತ್ತು.

ಪಂದ್ಯದ ಸಮಯವನ್ನು ಪರಿಗಣಿಸಿದ ನಂತರ ಭಾರತ ತಂಡ ಗುರಿಗಿಂತ ಒಂದು ಓವರ್ ಕಡಿಮೆ ಇರುವುದು ಕಂಡು ಬಂದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಮ್ಯಾಚ್ ರೆಫರಿ ಮಿಚೆಲ್ ಪೆರೇರ ವಿಧಿಸಿದ ದಂಡವನ್ನು ಸ್ವೀಕರಿಸಿದ್ದಾರೆ.

ಭಾರತ ತಂಡ ಇಂದೋರ್‌ನಲ್ಲಿ ರವಿವಾರ ನಡೆಯಲಿರುವ ಗೆಲ್ಲಲೇಬೇಕಾದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News