×
Ad

ಮಹಿಳೆಯರ ವಿಶ್ವಕಪ್ | ಕಪ್ಪು ತೋಳುಪಟ್ಟಿ ಧರಿಸಿ ಆಡಿದ ಭಾರತ, ಆಸ್ಟ್ರೇಲಿಯದ ಆಟಗಾರ್ತಿಯರು

Update: 2025-10-30 20:15 IST

Photo Credit : PTI

ನವಿ ಮುಂಬೈ,ಅ.30: ಮಹಿಳೆಯರ ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್‌ನಲ್ಲಿ ಟಾಸ್ ಜಯಿಸಿದ ಆಸ್ಟ್ರೇಲಿಯ ತಂಡವು ಭಾರತ ತಂಡದ ವಿರುದ್ಧ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಉಭಯ ತಂಡಗಳು ಬೆನ್ ಆಸ್ಟಿನ್ ಸ್ಮರಣಾರ್ಥ ಕಪ್ಪು ತೋಳುಪಟ್ಟಿ ಧರಿಸಿ ಮೈದಾನಕ್ಕೆ ಇಳಿದಿದ್ದು, ಕ್ರೀಡಾಂಗಣದಲ್ಲಿ ದುಃಖದ ವಾತಾವರಣ ಸೃಷ್ಟಿಯಾಯಿತು.

ಮೆಲ್ಬರ್ನ್‌ನಲ್ಲಿ ಗುರುವಾರ ಅಭ್ಯಾಸ ನಿರತರಾಗಿದ್ದಾಗ ಕ್ರಿಕೆಟ್ ಚೆಂಡು ಬಡಿದು 17ರ ಹರೆಯದ ಬಾಲಕ ಬೆನ್ ಆಸ್ಟಿನ್ ನಿಧನರಾದ ಹಿನ್ನೆಲೆಯಲ್ಲಿ ಅವರ ಗೌರವಾರ್ಥ ಎರಡೂ ತಂಡಗಳ ಆಟಗಾರ್ತಿಯರು ಕಪ್ಪುತೋಳುಪಟ್ಟಿ ಧರಿಸಿ ಆಡಿದರು.

ಆಸ್ಟಿನ್ ನಿಧನವು ವಿಶ್ವ ಕ್ರಿಕೆಟ್‌ನ್ನು ಬೆಚ್ಚಿಬೀಳಿಸಿದೆ. ಕಪ್ಪುತೋಳು ಪಟ್ಟಿಯು ಎರಡು ಕ್ರಿಕೆಟ್ ರಾಷ್ಟ್ರಗಳ ನಡುವೆ ಹಂಚಿಕೊಳ್ಳಲಾದ ಏಕತೆ ಹಾಗೂ ಸಹಾನುಭೂತಿಯ ದ್ಯೋತಕವಾಗಿದೆ.

ಗಾಯದಿಂದ ಚೇತರಿಸಿಕೊಂಡು ತಂಡವನ್ನು ಮುನ್ನಡೆಸಲು ಮರಳಿರುವ ಆಸ್ಟ್ರೇಲಿಯದ ನಾಯಕಿ ಅಲಿಸಾ ಹೀಲಿ, ‘‘ನಾವು ಮೊದಲು ಬ್ಯಾಟಿಂಗ್ ಮಾಡಲಿದ್ದೇವೆ. ಇಲ್ಲಿನ ಪರಿಸ್ಥಿತಿ ನಮಗೆ ರನ್ ಗಳಿಸಲು ಪೂರಕವಾಗಿದೆ. ಗಾಯದಿಂದ ಚೇತರಿಸಿಕೊಳ್ಳಲು 10 ದಿನಗಳ ವಿಶ್ರಾಂತಿ ಪಡೆದಿದ್ದೇನೆ.ಇದು ಸೆಮಿ ಫೈನಲ್. ಯಾರು ಉತ್ತಮವಾಗಿ ಆಡುತ್ತಾರೋ ಅವರಿಗೆ ಫಲಿತಾಂಶ ಸಿಗುತ್ತದೆ. ಆಡುವ 11ರ ಬಳಗದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ವೇರ್‌ಹ್ಯಾಮ್‌ ಬದಲಿಗೆ ಸೋಫಿ ಮೊಲಿನಿಯಕ್ಸ್ ಅವಕಾಶ ಪಡೆದಿದ್ದಾರೆ’’ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News