×
Ad

ವಿಶ್ವ ಚಾಂಪಿಯನ್‌ಶಿಪ್ಸ್‌ನಿಂದ ಕುಸ್ತಿ ಪಟುಗಳನ್ನು ಹಿಂಪಡೆದ ಕುಸ್ತಿ ಫೆಡರೇಶನ್

Update: 2024-10-24 22:12 IST

pc : ndtv 

ಹೊಸದಿಲ್ಲಿ : ಸರಕಾರದ ಹಸ್ತಕ್ಷೇಪವನ್ನು ವಿರೋಧಿಸಿ ಭಾರತೀಯ ಕುಸ್ತಿ ಫೆಡರೇಶನ್ ಗುರುವಾರ ಅಲ್ಬೇನಿಯದ ತಿರಾನದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್ಸ್‌ನಿಂದ ಭಾರತೀಯ ಕುಸ್ತಿಪಟುಗಳನ್ನು ಹಿಂಪಡೆದಿದೆ.

ಸ್ವಾಯತ್ತ ಸಂಸ್ಥೆ ಭಾರತೀಯ ಕುಸ್ತಿ ಫೆಡರೇಶನ್‌ನ ಆಡಳಿತದಲ್ಲಿ ಕೇಂದ್ರ ಕ್ರೀಡಾ ಸಚಿವಾಲಯವು ಹಸ್ತಕ್ಷೇಪ ನಡೆಸುವುದನ್ನು ಮುಂದುವರಿಸಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಫೆಡರೇಶನನ್ನು ಅಮಾನ್ಯಗೊಳಿಸುವ ಅದರ ನಿರ್ಧಾರವು ಫೆಡರೇಶನ್‌ನ ಸುಗಮ ಕಾರ್ಯನಿರ್ವಹಣೆಗೆ ಅಡ್ಡಿಯುಂಟು ಮಾಡುತ್ತಿದೆ ಎಂದು ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಅಧ್ಯಕ್ಷ ನೆನಡ್ ಲಲೊವಿಚ್‌ರಿಗೆ ಬರೆದ ಪತ್ರದಲ್ಲಿ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಸಂಜಯ್ ಸಿಂಗ್ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News