×
Ad

2026ರ ಆವೃತ್ತಿಯ ಮಹಿಳೆಯರ ಟಿ-20 ವಿಶ್ವಕಪ್ ವೇಳಾಪಟ್ಟಿ ಪ್ರಕಟ

Update: 2025-06-18 20:37 IST

PC : ICC

ಲಂಡನ್: 2026ರ ಆವೃತ್ತಿಯ ಮಹಿಳೆಯರ ಟಿ-20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಬುಧವಾರ ಬಿಡುಗಡೆಯಾಗಿದ್ದು, ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯು 24 ದಿನಗಳ ರೋಚಕ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಆತಿಥ್ಯವಹಿಸಲು ಸಜ್ಜಾಗಿದೆ.

ಜೂನ್ 12ರಂದು ಎಜ್‌ಬಾಸ್ಟನ್‌ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಶ್ರೀಲಂಕಾ ತಂಡವನ್ನು ಎದುರಿಸುವ ಮೂಲಕ 12 ತಂಡಗಳ ಪಂದ್ಯಾವಳಿಗೆ ಚಾಲನೆ ಸಿಗಲಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಜೂನ್ 14ರಂದು ಮುಖಾಮುಖಿಯಾಗಲಿವೆ.

8 ದೇಶಗಳು ಈಗಾಗಲೇ ತಮ್ಮ ಸ್ಥಾನವನ್ನು ಖಚಿತಪಡಿಸಿದ್ದು, ಪಾಲ್ಗೊಳ್ಳಲಿರುವ ಕೊನೆಯ 4 ತಂಡಗಳು ಮುಂದಿನ ವರ್ಷ ನಡೆಯುವ ಮಹಿಳೆಯರ ಐಸಿಸಿ ಟಿ-20 ವಿಶ್ವಕಪ್ ಕ್ವಾಲಿಫೈಯರ್‌ನ ಮೂಲಕ ನಿರ್ಧಾರವಾಗಲಿದೆ. ಪ್ರತಿಷ್ಠಿತ ಟಿ-20 ವಿಶ್ವಕಪ್ ಟ್ರೋಫಿಯು ಸದ್ಯ ನ್ಯೂಝಿಲ್ಯಾಂಡ್ ಬಳಿ ಇದೆ.

ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳು ಲಂಡನ್‌ನಲ್ಲಿ ನಡೆಯಲಿದೆ ಎಂದು ಈಗಾಗಲೇ ಖಚಿತವಾಗಿದೆ. ಈ ಎರಡು ಪಂದ್ಯಗಳು ಕ್ರಮವಾಗಿ ದಿ ಓವಲ್ ಹಾಗೂ ಲಾರ್ಡ್ಸ್‌ನ ಕ್ರೀಡಾಂಗಣದ ಆತಿಥ್ಯದಲ್ಲಿ ನಡೆಯಲಿದೆ.

ಪಂದ್ಯಾವಳಿಯ ಆರಂಭಿಕ ಹಂತಗಳಲ್ಲಿ ಪ್ರಮುಖ ಕ್ರೀಡಾಂಗಣಗಳಾದ ಹೆಡ್ಡಿಂಗ್ಲೆ, ಓಲ್ಡ್ ಟ್ರಾಫೋರ್ಡ್ ಕ್ರಿಕೆಟ್ ಗ್ರೌಂಡ್, ಬ್ರಿಸ್ಟೋಲ್ ಕೌಂಟಿ ಗ್ರೌಂಡ್ ಹಾಗೂ ಹ್ಯಾಂಪ್‌ಶೈರ್ ಬೌಲ್ ವಿಶ್ವ ದರ್ಜೆಯ ಕ್ರಿಕೆಟ್ ಪ್ರದರ್ಶಿಸಲಿವೆ.

► 2026ರ ಆವೃತ್ತಿಯ ಮಹಿಳೆಯರ ಟಿ20 ವಿಶ್ವಕಪ್‌ನ ಗ್ರೂಪ್‌ಗಳು

ಗ್ರೂಪ್ 1: ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ಭಾರತ, ಪಾಕಿಸ್ತಾನ, ಕ್ವಾಲಿಫೈಯರ್, ಕ್ವಾಲಿಫೈಯರ್

ಗ್ರೂಪ್ 2: ವೆಸ್ಟ್‌ಇಂಡೀಸ್, ಇಂಗ್ಲೆಂಡ್, ನ್ಯೂಝಿಲ್ಯಾಂಡ್, ಶ್ರೀಲಂಕಾ, ಕ್ವಾಲಿಫೈಯರ್.

► ಮಹಿಳೆಯರ ಟಿ-20 ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿ

ಜೂನ್ 12: ಇಂಗ್ಲೆಂಡ್-ಶ್ರೀಲಂಕಾ, ಎಜ್‌ಬಾಸ್ಟನ್

ಜೂನ್ 13: ಕ್ವಾಲಿಫೈಯರ್-ಕ್ವಾಲಿಫೈಯರ್, ಓಲ್ಡ್ ಟ್ರಾಫೋರ್ಡ್

ಜೂನ್ 13: ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ, ಓಲ್ಡ್ ಟ್ರಾಫೋರ್ಡ್

ಜೂನ್ 13: ವೆಸ್ಟ್‌ಇಂಡೀಸ್-ನ್ಯೂಝಿಲ್ಯಾಂಡ್, ಹ್ಯಾಂಪ್‌ಶೈರ್ ಬೌಲ್

ಜೂನ್ 14: ಕ್ವಾಲಿಫೈಯರ್-ಕ್ವಾಲಿಫೈಯರ್,ಎಜ್‌ಬಾಸ್ಟನ್

ಜೂನ್ 14: ಭಾರತ-ಪಾಕಿಸ್ತಾನ, ಎಜ್‌ಬಾಸ್ಟನ್

ಜೂನ್ 16: ನ್ಯೂಝಿಲ್ಯಾಂಡ್-ಶ್ರೀಲಂಕಾ, ಹ್ಯಾಂಪ್‌ಶೈರ್ ಬೌಲ್

ಜೂನ್ 16: ಇಂಗ್ಲೆಂಡ್-ಕ್ವಾಲಿಫೈಯರ್, ಹ್ಯಾಂಪ್‌ಶೈರ್ ಬೌಲ್

ಜೂನ್ 17: ಆಸ್ಟ್ರೇಲಿಯ-ಕ್ವಾಲಿಫೈಯರ್, ಹೆಡ್ಡಿಂಗ್ಲೆ

ಜೂನ್ 17: ಭಾರತ-ಕ್ವಾಲಿಫೈಯರ್, ಹೆಡ್ಡಿಂಗ್ಲೆ

ಜೂನ್ 17: ದಕ್ಷಿಣ ಆಫ್ರಿಕಾ-ಪಾಕಿಸ್ತಾನ, ಎಜ್‌ಬಾಸ್ಟನ್

ಜೂನ್ 18: ವೆಸ್ಟ್‌ಇಂಡೀಸ್-ಕ್ವಾಲಿಫೈಯರ್, ಹೆಡ್ಡಿಂಗ್ಲೆ

ಜೂನ್ 19: ನ್ಯೂಝಿಲ್ಯಾಂಡ್-ಕ್ವಾಲಿಫೈಯರ್, ಹ್ಯಾಂಪ್‌ಶೈರ್ ಬೌಲ್

ಜೂನ್ 20: ಆಸ್ಟ್ರೇಲಿಯ-ಕ್ವಾಲಿಫೈಯರ್, ಹ್ಯಾಂಪ್‌ಶೈರ್ ಬೌಲ್

ಜೂನ್ 20: ಪಾಕಿಸ್ತಾನ-ಕ್ವಾಲಿಫೈಯರ್, ಹ್ಯಾಂಪ್‌ಶೈರ್ ಬೌಲ್

ಜೂನ್ 20: ಇಂಗ್ಲೆಂಡ್-ಕ್ವಾಲಿಫೈಯರ್, ಹೆಡ್ಡಿಂಗ್ಲೆ

ಜೂನ್ 21: ವೆಸ್ಟ್‌ಇಂಡೀಸ್-ಶ್ರೀಲಂಕಾ, ಬ್ರಿಸ್ಟೋಲ್ ಕೌಂಟಿ ಗ್ರೌಂಡ್

ಜೂನ್ 21: ದಕ್ಷಿಣ ಆಫ್ರಿಕಾ-ಭಾರತ, ಓಲ್ಡ್ ಟ್ರಾಫೋರ್ಡ್

ಜೂನ್ 23: ನ್ಯೂಝಿಲ್ಯಾಂಡ್-ಕ್ವಾಲಿಫೈಯರ್, ಬ್ರಿಸ್ಟೋಲ್ ಕೌಂಟಿ ಗ್ರೌಂಡ್

ಜೂನ್ 23: ಶ್ರೀಲಂಕಾ-ಕ್ವಾಲಿಫೈಯರ್, ಬ್ರಿಸ್ಟೋಲ್ ಕೌಂಟಿ ಗ್ರೌಂಡ್

ಜೂನ್ 23: ಆಸ್ಟ್ರೇಲಿಯ-ಪಾಕಿಸ್ತಾನ, ಹೆಡ್ಡಿಂಗ್ಲೆ

ಜೂನ್ 24: ಇಂಗ್ಲೆಂಡ್-ವೆಸ್ಟ್‌ಇಂಡೀಸ್, ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್

ಜೂನ್ 25: ಭಾರತ-ಕ್ವಾಲಿಫೈಯರ್, ಓಲ್ಡ್ ಟ್ರಾಫೋರ್ಡ್ ಕ್ರಿಕೆಟ್ ಗ್ರೌಂಡ್

ಜೂನ್ 25: ದಕ್ಷಿಣ ಆಫ್ರಿಕಾ-ಕ್ವಾಲಿಫೈಯರ್, ಬ್ರಿಸ್ಟೋಲ್ ಕೌಂಟಿ ಗ್ರೌಂಡ್

ಜೂನ್ 26: ಶ್ರೀಲಂಕಾ-ಕ್ವಾಲಿಫೈಯರ್, ಓಲ್ಡ್ ಟ್ರಾಫೋರ್ಡ್ ಕ್ರಿಕೆಟ್ ಗ್ರೌಂಡ್

ಜೂನ್ 27: ಪಾಕಿಸ್ತಾನ-ಕ್ವಾಲಿಫೈಯರ್, ಬ್ರಿಸ್ಟೋಲ್ ಕೌಂಟಿ ಗ್ರೌಂಡ್

ಜೂನ್ 27: ವೆಸ್ಟ್‌ಇಂಡೀಸ್-ಕ್ವಾಲಿಫೈಯರ್, ಬ್ರಿಸ್ಟೋಲ್ ಕೌಂಟಿ ಗ್ರೌಂಡ್

ಜೂನ್ 27: ಇಂಗ್ಲೆಂಡ್-ನ್ಯೂಝಿಲ್ಯಾಂಡ್, ದಿ ಓವಲ್

ಜೂನ್ 28: ದಕ್ಷಿಣ ಆಫ್ರಿಕಾ-ಕ್ವಾಲಿಫೈಯರ್, ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್

ಜೂನ್ 28: ಆಸ್ಟ್ರೇಲಿಯ-ಭಾರತ, ಲಾರ್ಡ್ಸ್ ಕ್ರಿಕೆಟ್ ಮೈದಾನ

ಜೂನ್ 30: ಮೊದಲ ಸೆಮಿ ಫೈನಲ್, ದಿ ಓವಲ್

ಜುಲೈ 2: ಎರಡನೇ ಸೆಮಿ ಫೈನಲ್, ದಿ ಓವಲ್

ಜುಲೈ 5: ಫೈನಲ್, ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News