×
Ad

ವಿಶ್ವಕಪ್: ನ್ಯೂಝಿಲ್ಯಾಂಡ್ ವಿರುದ್ಧ ಭಾರತ 340/3

ಸ್ಮೃ ತಿ ಮಂಧಾನ, ಪ್ರತಿಕಾ ರಾವಲ್ ಶತಕ

Update: 2025-10-23 22:44 IST

 ಸ್ಮೃ ತಿ ಮಂಧಾನ | Photo Credit : AP \ PTI 

ನವಿ ಮುಂಬೈ: ಆರಂಭಿಕ ಆಟಗಾರ್ತಿಯರಾದ ಸ್ಮೃ ತಿ ಮಂಧಾನ ಹಾಗೂ ಪ್ರತಿಕಾ ರಾವಲ್ ಅವರ ದಾಖಲೆಯ ಜೊತೆಯಾಟದ ನೆರವಿನಿಂದ ನ್ಯೂಝಿಲ್ಯಾಂಡ್ ವಿರುದ್ಧ ಗುರುವಾರ ನಡೆದ ಮಹಿಳೆಯರ ವಿಶ್ವಕಪ್‌ನ 22ನೇ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು 49 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 340 ರನ್ ಗಳಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡದ ಪರ ಮೊದಲ ವಿಕೆಟ್‌ಗೆ 212 ರನ್ ಸೇರಿಸಿದ ರಾವಲ್(122 ರನ್, 134 ಎಸೆತ, 13 ಬೌಂಡರಿ, 2 ಸಿಕ್ಸರ್)ಹಾಗೂ ಮಂಧಾನ(109 ರನ್, 95 ಎಸೆತ, 10 ಬೌಂಡರಿ, 4 ಸಿಕ್ಸರ್)ಭರ್ಜರಿ ಆರಂಭ ಒದಗಿಸಿದರು. ಮಹಿಳೆಯರ ವಿಶ್ವಕಪ್ ಇತಿಹಾಸದಲ್ಲಿ ಭಾರತ ಗಳಿಸಿದ ಸರ್ವಶ್ರೇಷ್ಠ ಜೊತೆಯಾಟ ಇದಾಗಿದೆ. ಮಂಧಾನ-ರಾವಲ್ 7ನೇ ಬಾರಿ ಶತಕದ ಜೊತೆಯಾಟದಲ್ಲಿ ಭಾಗಿಯಾದರು. 2022ರಲ್ಲಿ ಮಂಧಾನ ಹಾಗೂ ಹರ್ಮನ್‌ಪ್ರೀತ್ ವಿಂಡೀಸ್ ವಿರುದ್ಧ 4ನೇ ವಿಕೆಟ್‌ಗೆ ಗರಿಷ್ಠ ಜೊತೆಯಾಟ(184)ನಡೆಸಿದ್ದರು.

ಮಹಿಳೆಯರ ವಿಶ್ವಕಪ್‌ನಲ್ಲಿ ಇಬ್ಬರು ಆರಂಭಿಕ ಆಟಗಾರ್ತಿಯರು ಶತಕ ಗಳಿಸಿದ್ದು ಇದು ಮೂರನೇ ಬಾರಿ.

ಮಂಧಾನ-ರಾವಲ್ ವಿಶಾಖಪಟ್ಟಣದಲ್ಲಿ ಆಸ್ಟ್ರೇಲಿಯದ ವಿರುದ್ಧ 155 ರನ್ ಜೊತೆಯಾಟ ನಡೆಸಿ ಭಾರತವು 330 ರನ್ ಗಳಿಸಲು ನೆರವಾಗಿದ್ದರು. ಇದೀಗ ಭಾರತವು 2 ವಾರಗಳ ಹಿಂದಿನ ವಿಶ್ವಕಪ್‌ನ ತನ್ನ ಗರಿಷ್ಠ ಸ್ಕೋರ್ ದಾಖಲೆಯನ್ನು ಮುರಿದಿದೆ.

3ನೇ ಕ್ರಮಾಂಕದಲ್ಲಿ ಭಡ್ತಿ ಪಡೆದು ಬಂದ ಜೆಮಿಮಾ ರೊಡ್ರಿಗಸ್(ಔಟಾಗದೆ 76 ರನ್, 55 ಎಸೆತ, 11 ಬೌಂಡರಿ)ಪ್ರಸಕ್ತ ವಿಶ್ವಕಪ್‌ನಲ್ಲಿ ವೇಗದ ಅರ್ಧಶತಕ ಗಳಿಸಿದ ಭಾರತದ ಆಟಗಾರ್ತಿ ಎನಿಸಿಕೊಂಡರು. ಮಳೆಬಾಧಿತ ಪಂದ್ಯದಲ್ಲಿ ಭಾರತ ತಂಡ ಕೊನೆಯ 9 ಓವರ್‌ಗಳಲ್ಲಿ 86 ರನ್ ಕಲೆ ಹಾಕಿ 3 ವಿಕೆಟ್‌ಗೆ 340 ರನ್ ಗಳಿಸಲು ನೆರವಾದರು.

77 ರನ್ ಗಳಿಸಿದಾಗ ಜೀವದಾನ ಪಡೆದಿದ್ದ ಮಂಧಾನ 88 ಎಸೆತಗಳಲ್ಲಿ 14ನೇ ಶತಕ ಪೂರೈಸಿದರು. ಈ ವರ್ಷ ತನ್ನ 5ನೇ ಶತಕ ಸಿಡಿಸಿದರು. ರಾವಲ್ 122 ಎಸೆತಗಳಲ್ಲಿ ತನ್ನ 2ನೇ ಶತಕ ದಾಖಲಿಸಿದರು. 23 ಇನಿಂಗ್ಸ್‌ಗಳಲ್ಲಿ 1,000 ರನ್ ಪೂರೈಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News