ವಿಶ್ವಕಪ್ : ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನದ ಮೊದಲ ವಿಕೆಟ್ ಪತನ
Update: 2023-10-20 20:13 IST
PHOTO : x/@TheRealPCB
ಬೆಂಗಳೂರು : ಇಲ್ಲಿನ ಎಂ ಚಿನ್ನಸ್ವಾಮಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ ಪಂದ್ಯ ಅಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ 134 ರನ್ ಗಳಿಸಿದೆ.
ಅಸ್ಟ್ರೇಲಿಯಾ ನೀಡಿದ 368 ರನ್ ಕಠಿಣ ಗುರಿ ಪಡೆದು ಬ್ಯಾಟಿಂಗ್ ಬಂದ ಪಾಕಿಸ್ತಾನ ಬ್ಯಾಟರ್ಸ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಬ್ಯಾಟ್ ಮಾಡಿದರು. ಅಬ್ದುಲ್ಲಾ ಶಫೀಕ್ 7 ಬೌಂಡರಿ 2 ಸಿಕ್ಸರ್ ಸಹಿತ 64 ಗಳಿಸಿ ಮಾರ್ಕಸ್ ಸ್ಟೋನಿಸ್ ಬೌಲಿಂಗ್ ನಲ್ಲಿ ಮ್ಯಾಕ್ಸ್ ವೆಲ್ ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಇಮಾಮ್ ಉಲ್ ಹಕ್ 9 ಬೌಂಡರಿ ಸಹಾಯದಿಂದ 63 ರನ್ ನೊಂದಿಗೆ ಅರ್ಧಶತಕ ಗಳಿಸಿ ಬ್ಯಾಟ್ ಮಾಡುತ್ತಿದ್ದಾರೆ. ಪಾಕ್ ನಾಯಕ ಬಾಬರ್ ಅಝಮ್ ಕ್ರೀಸ್ ನಲ್ಲಿದ್ದಾರೆ.
ಪಾಕಿಸ್ತಾನ 21 ಓವರ್ ಗಳಲ್ಲಿ 134 ರನ್ ಗಳಿಸಿದೆ. ಪಾಕಿಸ್ತಾನಕ್ಕೆ ಗೆಲುವಿಗೆ 234 ರನ್ಗಳ ಅವಶ್ಯಕತೆಯಿದೆ.