×
Ad

ವಿಶ್ವಕಪ್ ಗೆ ತಯಾರಿ: 10 ವರ್ಷಗಳ ನಂತರ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿರುವ ನ್ಯೂಝಿಲ್ಯಾಂಡ್

Update: 2023-08-17 23:10 IST

Photo : Twitter \ @ICC

ಢಾಕಾ: ಸೆಪ್ಟಂಬರ್ ಹಾಗೂ ನವೆಂಬರ್ನಲ್ಲಿ ನಿಗದಿಯಾಗಿರುವ ಏಕದಿನ ಹಾಗೂ ಟೆಸ್ಟ್ ಸರಣಿಗಳಲ್ಲಿ ಭಾಗವಹಿಸಲು ನ್ಯೂಝಿಲ್ಯಾಂಡ್ ತಂಡ 10 ವರ್ಷಗಳ ನಂತರ ಮೊದಲ ಬಾರಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲು ಸಜ್ಜಾಗಿದೆ.

ಮೂರು ಪಂದ್ಯಗಳ ಏಕದಿನ ಸರಣಿಯು ಭಾರತದಲ್ಲಿ ನಡೆಯುವ ವಿಶ್ವಕಪ್ಗಿಂತ ಮೊದಲು ಉಭಯ ತಂಡಗಳ ಪಾಲಿಗೆ ರಂಗ ತಾಮೀಮು ಎನಿಸಿಕೊಂಡಿದೆ.

ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಅಕ್ಟೋಬರ್ 5ರಂದು ಅಹಮದಾಬಾದ್ ನಲ್ಲಿ ಕಳೆದ ಆವೃತ್ತಿಯ ರನ್ನರ್ಸ್ ಅಪ್ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸುವ ಮೂಲಕ ಈ ವರ್ಷದ ವಿಶ್ವಕಪ್ಗೆ ಚಾಲನೆ ಸಿಗಲಿದೆ.

ಬಾಂಗ್ಲಾದೇಶ ತಂಡ ಧರ್ಮಶಾಲಾದಲ್ಲಿ ಅಕ್ಟೋಬರ್ 7ರಂದು ಅಫ್ಘಾನಿಸ್ತಾನ ವಿರುದ್ದ ಆಡುವುದರೊಂದಿಗೆ ತನ್ನ ವಿಶ್ವಕಪ್ ಪಯಣ ಆರಂಭಿಸಲಿದೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಗುರುವಾರ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ ಸೆಪ್ಟಂಬರ್ 21ರಂದು ಪ್ರವಾಸ ಆರಂಭವಾಗಲಿದೆ. ಎಲ್ಲ ಮೂರು ಏಕದಿನ ಪಂದ್ಯಗಳು ಮೀರ್ಪುರದ ಶೇರ್-ಇ-ಬಾಂಗ್ಲಾ ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯಲಿವೆ.

ಟೆಸ್ಟ್ ಸರಣಿಯು ವಿಶ್ವಕಪ್ ಕೊನೆಗೊಂಡ ನಂತರ ನವೆಂಬರ್ನಲ್ಲಿ ಆರಂಭವಾಗಲಿದೆ. ಈ ಎರಡು ಟೆಸ್ಟ್ ಪಂದ್ಯಗಳ ಸ್ಥಳಗಳನ್ನು ಇನ್ನೂ ಘೋಷಿಸಲಾಗಿಲ್ಲ.

ಕಿವೀಸ್ ತಂಡವು 2013ರಲ್ಲಿ ಕೊನೆಯ ಬಾರಿ ಪೂರ್ಣಪ್ರಮಾಣದ ಸರಣಿ ಆಡಲು ಬಾಂಗ್ಲಾದೇಶಕ್ಕೆ ಪ್ರಯಾಣಿಸಿತ್ತು. ಆಗ 3 ಪಂದ್ಯಗಳ ಏಕದಿನ ಸರಣಿಯನ್ನು ಬಾಂಗ್ಲಾದೇಶವು 3-0 ಅಂತರದಿಂದ ಗೆದ್ದುಕೊಂಡಿತ್ತು. ಕಿವೀಸ್ ಏಕೈಕ ಟ್ವೆಂಟಿ-20 ಪಂದ್ಯವನ್ನು ಜಯಿಸುವ ಮೂಲಕ ತನ್ನ ಬಾಂಗ್ಲಾದೇಶ ಪ್ರವಾಸವನ್ನು ಮುಕ್ತಾಯಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News