×
Ad

WPL | ಆರ್‌ಸಿಬಿ ವಿರುದ್ಧ 25 ರನ್‌ಗಳ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್

Update: 2024-02-29 22:58 IST

photo: x/@wplt2

ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು 25 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ್ದ 195 ರನ್‌ ಗಳ ಕಠಿಣ ಗುರಿ ಬೆನ್ನತ್ತಲು ಬ್ಯಾಟಿಂಗ್‌ ಗೆ ಇಳಿದ ಆರ್‌ಸಿಬಿ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕರಾಗಿ ಬ್ಯಾಟಿಂಗ್‌ ಇಳಿದಿದ್ದ ನಾಯಕಿ ಸ್ಮೃತಿ ಮಂದಾನ 10 ಬೌಂಡರಿ 3 ಸಿಕ್ಸರ್ ಸಹಿತ ಸ್ಪೋಟಕ 74 ರನ್ ಗಳಿಸಿದರೆ, ಸೋಫಿ ಡಿವೈನ್‌ 1 ಬೌಂಡರಿ 2 ಸಿಕ್ಸರ್‌ ಸಹಿತ 23 ರನ್‌ ಪೇರಿಸಿ ಕ್ರಮವಾಗಿ ಮರಿಝನ್ನೆ ಹಾಗೂ ಅರುಂಧತಿ ರೆಡ್ಡಿಗೆ ವಿಕಟ್‌ ಒಪ್ಪಿಸಿದರು. ಬಳಿಕ ಬ್ಯಾಟಿಂಗ್‌ ಬಂದ ಸಬ್ಬಿನೇನಿ ಮೇಘನಾ 36 ರನ್ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಪ್ರಯತ್ನದಲ್ಲಿದ್ದರು. ಆದರೆ ತನಿಯಾ ಬಾಟಿಯಾ ಅವರ ಕ್ಷೇತ್ರ ರಕ್ಷಣಾ ಚಾಣಾಕ್ಷತೆಯಿಂದ ರನೌಟ್‌ ಗೆ ಬಲಿಯಾದರು. ನಂತರ ಬಂದ ಯಾವೊಬ್ಬ ಬ್ಯಾಟರ್‌ ಕೂಡ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಲಿಲ್ಲ. ಕಡೆಗೆ ನಿಗಧಿತ 20 ಓವರ್‌ ಗಳಲ್ಲಿ ‌ 169 ರನ್‌ ಬಾರಿಸಿ 9 ವಿಕೆಟ್‌ ಕಳೆದುಕೊಂಡಿತು.

ರಿಚಾ ಘೋಶ್ 19 ರನ್, ಜೋರ್ಜಿಯಾ 6, ನಾಡಿನ್‌ 1, ಸಿಮ್ರಾನ್‌ 2 ರನ್‌ ಗಳಿಸಿದರೆ, ಸೋಫಿ ಹಾಗೂ ಆಶಾ ಕ್ರಮವಾಗಿ 1 ರನ್‌ ಬಾರಿಸಿದ್ದರು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ  ಜೆಸ್ ಜೊನೆಸೆನ್ 3 ವಿಕೆಟ್, ಮರಿಝನ್ನೆ ಕಪ್ ಮತ್ತು ಅರುಂಧತಿ ರೆಡ್ಡಿ‌ ತಲಾ 2 ವಿಕೆಟ್‌ ಪಡೆದರೆ, ಶಿಕಾ ಪಾಂಡೆ,1 ವಿಕೆಟ್ ಪಡೆದು  ಸಂಭ್ರಮಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News