×
Ad

ಡಬ್ಲ್ಯುಪಿಎಲ್ ಮಹಿಳಾ ಕ್ರಿಕೆಟ್‌ ನ ಚಿಂತನೆ ಬದಲಾಯಿಸಿದೆ: ಸ್ಮೃತಿ ಮಂಧಾನ

Update: 2025-02-03 22:17 IST

ಸ್ಮೃತಿ ಮಂಧಾನ 

ಬೆಂಗಳೂರು : ‘‘ಮಹಿಳಾ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ಮಹಿಳಾ ಕ್ರಿಕೆಟನ್ನು ಸುತ್ತುವರಿದಿದ್ದ ಚಿಂತನೆಗಳನ್ನು ಬದಲಾಯಿಸಿದೆ. ಇತರ ಕ್ರೀಡೆಗಳಲ್ಲೂ ಇಂತಹ ಯಶಸ್ಸಿನ ಕತೆಯನ್ನು ನೋಡುವ ವಿಶ್ವಾಸದಲ್ಲಿದ್ದೇನೆ’’ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ತಂಡದ ನಾಯಕಿ ಸ್ಮೃತಿ ಮಂಧಾನ ಸೋಮವಾರ ಅಭಿಪ್ರಾಯಪಟ್ಟರು.

ಮಂಧಾನ ಅವರು ಕಳೆದ ವರ್ಷ ಆರ್‌ಸಿಬಿ ತಂಡವು ಡಬ್ಲ್ಯುಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ಸಾರಥ್ಯವಹಿಸಿದ್ದರು. ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಆರ್‌ಸಿಬಿ ಚೊಚ್ಚಲ ಪ್ರಶಸ್ತಿ ಜಯಿಸಿತ್ತು.

‘‘ಡಬ್ಲ್ಯುಪಿಎಲ್‌ಗಿಂತ ಮುಂಚೆಯೇ ನಾವು ಬಿಗ್ ಬ್ಯಾಶ್ ಲೀಗ್‌ನಲ್ಲಿ ಆಡುತ್ತಿದ್ದೆವು. ನಮಗೆ ನಮ್ಮದೇ ಆದ ಲೀಗ್ ಯಾವಾಗ ಬರುತ್ತದೆ ಎಂದು ಎಲ್ಲರೂ ನಮ್ಮನ್ನು ಕೇಳುತ್ತಿದ್ದರು. ಡಬ್ಲ್ಯುಪಿಎಲ್ ಆಗಮನದಿಂದ ಮಹಿಳಾ ಕ್ರಿಕೆಟ್ ಸುತ್ತಲಿನ ಪರಿಕಲ್ಪನೆಯು ಬದಲಾಗಿದೆ’’ ಎಂದು ‘ಸ್ಪೋರ್ಟ್ಸ್ ಫಾರ್ವರ್ಡ್ ನೇಶನ್’ ವರದಿಯನ್ನು ಬಿಡುಗಡೆ ಮಾಡಿದ ನಂತರ ಮಂಧಾನ ಮಾತನಾಡಿದರು.

ಫೆಬ್ರವರಿ 14ರಿಂದ ಆರಂಭವಾಗುವ ಡಬ್ಲ್ಯುಪಿಎಲ್‌ನ ಮೂರನೇ ಆವೃತ್ತಿಯಲ್ಲಿ ಮಂಧಾನ ನೇತೃತ್ವದ ಆರ್‌ಸಿಬಿ ಪ್ರಶಸ್ತಿ ಉಳಿಸಿಕೊಳ್ಳುವತ್ತ ಚಿತ್ತಹರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News