×
Ad

WPL | ಮುಂಬೈ ಸೋಲಿಸಿ ಆರ್ ಸಿ ಬಿ ಫೈನಲ್ ಗೆ

Update: 2024-03-15 23:00 IST

Photo: X \ @wplt20

ಹೊಸದಿಲ್ಲಿ : ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ನ ಎಲಿಮಿನೇಟರ್ ರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ, ಆರ್ ಸಿ ಬಿ ತಂಡವು ಫೈನಲ್ ಪ್ರವೇಶಿಸಿದೆ.

ಆರ್ ಸಿ ಬಿ ನೀಡಿದ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿ, ಸೋಲೊಪ್ಪಿಕೊಂಡಿತು.

ಮುಂಬೈ ಪರ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ರಕ್ಷಣಾತ್ಮಕ ಆಟವಾಡಿ 30 ಎಸೆತಗಳಲ್ಲಿ 33 ರನ್ ಗಳಿಸಿದರು. ಕೊನೆಯವರೆಗೂ ಕ್ರೀಸ್ ನಲ್ಲಿ ಅಜೇಯರಾಗಿ ಉಳಿದ ಅಮೇಲಿಯ ಕೆರ್ 25 ಎಸೆತಗಳಲ್ಲಿ 27 ರನ್ ಗಳಿಸಿದರು. ನಾಟ್ ಸ್ಕೀವೆರ್ ಬ್ರುನ್ಟ್ 23, ಯಶಿಕಾ ಭಾಟಿಯಾ 19 ರನ್ ಗಳಿಸಿದರು.

ಕಡಿಮೆ ಮೊತ್ತದ ಗುರಿ ಬೆನ್ನತ್ತಿದ ಮುಂಬೈಗೆ ಗೆಲ್ಲುವ ಅವಕಾಶವಿತ್ತು. ಆದರೆ ಆರ್ ಸಿ ಬಿ ತಂಡದ ಸಂಘಟಿತ ಹೋರಾಟವು ಪಂದ್ಯವನ್ನು ರೋಚಕ ತಿರುವಿನತ್ತ ಕೊಂಡೊಯ್ಯಿತು. ಕೊನೆಯ ಎಸೆತಕ್ಕೆ ಮುಂಬೈಗೆ ಗೆಲ್ಲಲು 7 ರನ್ ಗಳ ಅವಶ್ಯಕತೆಯಿತ್ತು. ಆದರೆ ಮುಂಬೈ ತಂಡ ಕೇವಲ ಒಂದು ರನ್ ಗಳಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News