×
Ad

WPL | ದಿಲ್ಲಿ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆ 4 ವಿಕೆಟ್ ಗಳ ಜಯ

Update: 2024-02-23 23:23 IST

Photo : X/@CricCrazyJohns

ಬೆಂಗಳೂರು : ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಎರಡನೇ ಆವೃತ್ತಿಯ ಡಬ್ಲೂಪಿಎಲ್ ನ ಉದ್ಘಾಟನಾ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಜಯ ಸಾಧಿಸಿದೆ. ಕೊನೆಯವರೆಗೂ ರೋಚಕ ಕ್ಷಣ ಪಡೆದುಕೊಂಡ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಕ್ರೀಸ್ ನಲ್ಲಿ ನಿಂತುಕೊಂಡು ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. 20 ಓವರ್ ಗಳಲ್ಲಿ 173 ರನ್ ಗಳಿಸಿದ ಮುಂಬೈ ಇಂಡಿಯನ್ಸ್ ತಂಡ ಜಯಭೇರಿ ಬಾರಿಸಿತು.

19.5 ಓವರ್ ನಲ್ಲಿ 34 ಬಾಲ್‌ ಗಳಲ್ಲಿ 55 ರನ್ ಗಳಿಸಿದ ಹರ್ಮನ್ ಪ್ರೀತ್ ಕೌರ್ ಔಟ್ ಆದಾಗ ಮುಂಬೈ ಇಂಡಿಯನ್ಸ್ ತಂಡ ಸೋಲುವ ಭೀತಿಯಲ್ಲಿತ್ತು. ಆಗ ಕ್ರೀಸ್ ಗೆ ಬಂದ ಸಜೀವನ್ ಸಜನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಂಡಕ್ಕೆ ಗೆಲುವಿನ ಶುಭಾರಂಭ ನೀಡಿದರು.

ಮುಂಬೈ ಇಂಡಿಯನ್ಸ್‌ ಪರ ಯಶಿಕಾ ಭಾಟಿಯಾ 57 ರನ್‌ ಗಳಿಸಿದರು. 2 ಸಿಕ್ಸರ್‌ 8 ಬೌಂಡರಿ ಗಳಿಸಿದ ಅವರು ಅರುಂಧತೀ ರೆಡ್ಡಿ ಬೌಲಿಂಗ್‌ ನಲ್ಲಿ ಮರಿಝಾನೆ ಕಾಪ್‌ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರು. 

ಡೆಲ್ಲಿ ಕ್ಯಾಪಿಟಲ್ಸ್‌ ಪರ ಅರುಂಧತೀ ರೆಡ್ಡಿ, ಅಲೈಸ್‌ ಕ್ಯಾಪ್ಸೇ ತಲಾ 2 ವಿಕೆಟ್‌ ಪಡೆದರು. ಮರಿಝಾನ್‌ ಕ್ಯಾಪ್‌, ಶಿಖಾ ಪಾಂಡೆ ತಲಾ 1 ವಿಕೆಟ್‌ ಪಡೆದರು.

ಇದಕ್ಕೂ ಮುನ್ನ ಟಾಸ್‌ ಸೋತು ಬ್ಯಾಟಿಂಗ್‌ ಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 171 ರನ್‌ ಪೇರಿಸಿತು. ಡೆಲ್ಲಿ ಪರ ಅಲೈಸ್‌ ಕ್ಯಾಪ್ಸೆ 53 ಎಸೆತಗಳಲ್ಲಿ 3 ಸಿಕ್ಸರ್‌, 8 ಬೌಂಡರಿ ಗಳೊಂದಿಗೆ 75 ರನ್‌ ಗಳಿಸಿದರು. ಅಮೇಲಿಯಾ ಕೆರ್‌ ಅವರ ಎಸೆತದಲ್ಲಿ ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದ ಅಲೈಸ್‌ ಕ್ಯಾಪ್ಸೆ ಪೆವಿಲಿಯನ್‌ ದಾರಿ ಹಿಡಿದರು. ಇನ್ನುಳಿದಂತೆ ಜೆಮಿಮಾ ರೋಡ್ರಿಗಸ್‌ 42, ಮೆಗ್‌ ಲ್ಯಾನಿಂಗ್‌ 31 ರನ್‌ ಗಳಿಸಿದರು. 

ಮುಂಬೈ ಇಂಡಿಯನ್ಸ್‌ ಪರ ನಾಟ್‌ ಸ್ಕಿವರ್‌ ಬ್ರೂನ್ಟ್‌ , ಅಮೇಲಿಯಾ ಕೆರ್‌ ತಲಾ 2 ವಿಕೆಟ್‌ ಪಡೆದರು. ಶಬ್ನಿಮ್‌ ಇಸ್ಮಾಯಿಲ್‌ 1 ವಿಕೆಟ್‌ ಪಡೆದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News