ರಾಜ್ಯ ಮಟ್ಟದ ದಫ್ ಸ್ಪರ್ಧೆ: ಕಾಪು ಪೊಲಿಪು ತಂಡ ಚಾಂಪಿಯನ್
Update: 2025-02-10 18:35 IST
ಕಾಪು: ಕೂಳೂರು ಪಂಜಿಮೊಗರು ಸುಲ್ತಾನುಲ್ ಆರೀಫಿನ್ ದಫ್ ತಂಡದ ವತಿಯಿಂದ ರವಿವಾರ ಆಯೋಜಿಸಲಾದ ರಾಜ್ಯ ಮಟ್ಟದ ದಫ್ ಸ್ಪರ್ಧೆಯಲ್ಲಿ ಕಾಪು ಪೊಲಿಪು ಖುವ್ವತುಲ್ ಇಸ್ಲಾಮ್ ದಫ್ ತಂಡವು ಪ್ರಥಮ ಬಹುಮಾನ ಗೆದ್ದು ಚಾಂಪಿಯನ್ ಆಗಿ ಮೂಡಿಬಂದಿದೆ.
ಸ್ಪರ್ಧೆಯಲ್ಲಿ ಮಣಿಪುರ ತಂಡ ದ್ವಿತೀಯ ಹಾಗೂ ಶಿರ್ವ ತಂಡ ತೃತೀಯ ಬಹುಮಾನ ಪಡೆದುಕೊಂಡಿದೆ. ಉತ್ತಮ ಹಾಡುಗಾರರು ಪ್ರಶಸ್ತಿಯನ್ನು ಪೊಲಿಪು ತಂಡದ ಮೆಹೆಶೂಕ್ ಹಾಗೂ ಮಶೂಕ್ ಪಡೆದರು. ಸ್ಪರ್ಧೆಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು.