×
Ad

ಬ್ರಹ್ಮಾವರ : ತೆಂಗಿನ ಎಣ್ಣೆ ಮಿಲ್ ನಲ್ಲಿ ಬೆಂಕಿ ಅವಘಡ

Update: 2025-12-06 10:50 IST

ಬ್ರಹ್ಮಾವರ: ಕೊಕ್ಕರ್ಣೆ ಪೇಟೆಯಲ್ಲಿ ತೆಂಗಿನ ಎಣ್ಣೆ ಮಿಲ್ ವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅಪಾರ ನಷ್ಟ ಉಂಟಾಗಿದೆ.

ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಫ್ಯಾಕ್ಟರಿಯಲ್ಲಿ ದಾಸ್ತಾನು ಇರಿಸಿದ ತೆಂಗಿನಎಣ್ಣೆ ಮತ್ತು ಕೊಬ್ಬರಿ ಬೆಂಕಿಗೆ ಆಹುತಿಯಾಗಿದ್ದು, ಬೆಂಕಿಯ ಕೆನ್ನಾಲೆಗೆ ಫ್ಯಾಕ್ಟರಿಯ ಬಹುಭಾಗ ಸುಟ್ಟು ಕರಕಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News