×
Ad

‘ಒಳಮೀಸಲಾತಿ’ ಅಗತ್ಯ ತಂತ್ರಾಂಶ ಅಭಿವೃದ್ದಿಗೆ ಬಿಜೆಪಿ ಒತ್ತಾಯ

Update: 2025-11-03 19:01 IST

ಬೆಂಗಳೂರು : ರಾಜ್ಯ ಸರಕಾರ ನಿದ್ರೆಯಿಂದ ಎದ್ದು ಈ ಕೂಡಲೇ ಪರಿಶಿಷ್ಟ ಜಾತಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ಅಗತ್ಯ ತಂತ್ರಾಂಶ ಅಭಿವೃದ್ಧಿಪಡಿಸಿ ಸುಲಲಿತವಾಗಿ ಸೀಟು ಹಂಚಿಕೆ ಹಾಗೂ ಸರಕಾರಿ ಹುದ್ದೆಗಳು ಭರ್ತಿಯಾಗಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದ್ದಾರೆ.

ಸೋಮವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ಪರಿಶಿಷ್ಟ ಸಮುದಾಯಗಳ ಬಗ್ಗೆ ತನಗಿರುವುದು ಬದ್ಧತೆಯ ಕಾಳಜಿಯಲ್ಲ, ಅದು ‘ಮೊಸಳೆ ಕಣ್ಣೀರು’ ಎನ್ನುವುದು ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ತೋರಿಸಿ ಕೊಡುತ್ತಿದೆ’ ಎಂದು ದೂರಿದ್ದಾರೆ.

ಒಳಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಈಗಲೂ ಗೊಂದಲಗಳಿದ್ದು, ಸರಕಾರ ಹೊರಡಿಸಿರುವ ಆದೇಶದ ಅನ್ವಯ ಅಗತ್ಯ ತಂತ್ರಾಂಶವನ್ನೇ ಅಭಿವೃದ್ಧಿಪಡಿಸದೆ ಉಡಾಫೆ ಧೋರಣೆ ಪ್ರದರ್ಶಿಸಿದೆ. ಇದರ ಪರಿಣಾಮ ಸರಕಾರಿ ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ಆರಭಿಸಲಾಗಿಲ್ಲ. ಕೆಇಎ ಪ್ರಕಟಿಸಬೇಕಿರುವ ಸಿಇಟಿ ಸೀಟು ಹಂಚಿಕೆಗೆ ಅರ್ಜಿಸಲ್ಲಿಸಲು ತೊಡಕಾಗಿದ್ದು, ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಒಳಮೀಸಲಾತಿ ಅನ್ವಯ ಸವಲತ್ತು ಪಡೆಯಲು ವಿಳಂಬ ಉಂಟಾಗುತ್ತಿದೆ ಎಂದು ಅವರು ಗಮನ ಸೆಳೆದಿದ್ದಾರೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News