ಇರಾನ್‍ನಲ್ಲಿ ಸಿಲುಕಿದ್ದ ಒಂದೇ ಗ್ರಾಮದ 16 ಜನ ಕನ್ನಡಿಗರು ವಾಪಸ್
Update: 2025-06-21 21:21 IST
ಬೆಂಗಳೂರು : ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಇರಾನ್‍ನಲ್ಲಿ ಸಿಲುಕಿದ್ದ 16 ಮಂದಿ ಕನ್ನಡಿಗರು ಜನರು ಜೂ.20ರ ಶನಿವಾರ ತಾಯ್ನಾಡಿಗೆ ಮರಳಿದ್ದಾರೆ.
ಕೆಲಸ, ಸ್ವಯಂ ಉದ್ಯೋಗ ಸೇರಿದಂತೆ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ಚಿಕ್ಕಬಳ್ಳಾಫುರ ಜಿಲ್ಲೆ ಗೌರಿಬಿದನೂರು ತಾಲೂಜಿನ ಅಲಿಪುರ ಗ್ರಾಮದ 16 ಮಂದಿ ಕನ್ನಡಿಗರು ಜೂ.20ರ ಶನಿವಾರದಂದು ಇರಾನ್‍ನಿಂದ ದಿಲ್ಲಿಗೆ ಆಗಮಿಸಿದರು. ದಿಲ್ಲಿಯಿಂದ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ 16 ಜನ ಆಗಮಿಸುತ್ತಿದ್ದಂತೆ ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ, ಕುಟುಂಬಸ್ಥರು ಮತ್ತು ಗ್ರಾಮದ ಮುಖಂಡರು ಹೂವಿನ ಹಾಕಿ ಸ್ವಾಗತಕೋರಿದರು.