ಇಸ್ರೇಲ್‍ನಲ್ಲಿ ಸಿಲುಕಿದ್ದ ಕನ್ನಡಿಗರ ರಕ್ಷಣೆ: ತಾಯ್ನಾಡಿಗೆ ಮರಳಿದ 18 ಮಂದಿ ಕನ್ನಡಿಗರು
ಬೆಂಗಳೂರು : ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧದ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಇಸ್ರೇಲ್‍ನಲ್ಲಿ ಸಿಲುಕಿಕೊಂಡಿದ್ದ 18 ಮಂದಿ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲಾಗಿದೆ.
ಇಸ್ರೇಲ್‍ನ ಟೆಲ್ ಅವೀವ್ ಎಂಬಲ್ಲಿ 18 ಮಂದಿ ಕನ್ನಡಿಗರು ಸಿಲುಕಿದ್ದರು. ಅವರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲಾಗಿದೆ. ಮೊದಲು ಕುವೈತ್‍ಗೆ ಕರೆತಂದು ಅಲ್ಲಿಂದ ಮುಂಬೈ ಹಾಗೂ ಬೆಂಗಳೂರಿಗೆ ಕರೆತರಲಾಗಿದೆ.
ಇಸ್ರೇಲ್‍ನಿಂದ ಬೆಂಗಳೂರಿನ ವಿಮಾನನಿಲ್ದಾಣಕ್ಕೆ ಬಂದಿಳಿದ ಬಳಿಕ ಅಲ್ಲಿನ ಪರಿಸ್ಥಿತಿಯ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಮಹಿಳೆಯೊಬ್ಬರು, ಕರ್ನಾಟಕದ ಬಿ-ಪ್ಯಾಕ್ ನಿಯೋಗದಿಂದ 18 ಜನರ ತಂಡ ಅಧ್ಯಯನಕ್ಕೆಂದು ಇಸ್ರೇಲ್‍ಗೆ ತೆರಳಿದ್ದೆವು. ಯುದ್ಧದ ಸನ್ನಿವೇಶದ ವಿಷಯ ತಿಳಿದ ಕೂಡಲೇ ಭಯ ಹೆಚ್ಚಾಯಿತು. ನಾವು ಪ್ರತಿಷ್ಠಿತ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದೆವು. ಯುದ್ಧದ ಸೈರನ್ ಆಗುತ್ತಿದ್ದಂತೆ ನಮ್ಮ ಬಿಪ್ಯಾಕ್ ನಿಯೋಗ ಬಂಕರ್‌ಗೆ ತೆರಳಿತು. ಸದ್ಯ ಕರ್ನಾಟಕ ಸರಕಾರ ಹಾಗೂ ಕೇಂದ್ರ ಸರಕಾರದ ಸಚಿವರು, ಇಸ್ರೇಲ್‍ನಲ್ಲಿದ್ದ ಭಾರತದ ರಾಯಭಾರಿ ಸೇರಿದಂತೆ ಹಲವರು ಸಹಕಾರದಿಂದ ಎಲ್ಲರೂ ಸುರಕ್ಷಿತವಾಗಿ ಬೆಂಗಳೂರಿಗೆ ಬರಲು ಸಾಧ್ಯವಾಯಿತು ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.