×
Ad

ಜು.10 ರಿಂದ ಆ.9 ರವರೆಗೆ ನೇರಳೆ ಮಾರ್ಗಗಳ ಮೆಟ್ರೋ ಸಂಚಾರ 2 ಗಂಟೆ ಸ್ಥಗಿತ

Update: 2023-07-09 00:45 IST

ಬೆಂಗಳೂರು, ಜು.8: ನೇರಳ ಮಾರ್ಗದ ವಿಸ್ತರಿತ ಬೈಯಪ್ಪನಹಳ್ಳಿ ಮತ್ತು ಕೆ.ಆರ್.ಪುರ ಮೆಟ್ರೋ ನಿಲ್ದಾಣಗಳ ಸಂಪರ್ಕ ಕಲ್ಪಿಸುವ ಸಿಗ್ನಲಿಂಗ್ ಹಾಗೂ ಇತರ ಸಂಬಂಧಿತ ಕಾಮಗಾರಿ ಹಿನ್ನೆಲೆಯಲ್ಲಿ ಜು.10ರಿಂದ ಆ.9ರವರೆಗೆ ಬೆಳಗ್ಗೆ 5ರಿಂದ 7ರ ವರೆಗೆ(ಬೆಳಗ್ಗೆ 2 ಗಂಟೆ ಮಾತ್ರ) ಮೆಟ್ರೋ ಸೇವೆ ಸ್ಥಗಿತವಾಗಲಿದೆ.

ಬೈಯಪ್ಪನಹಳ್ಳಿ-ಸ್ವಾಮಿ ವಿವೇಕಾನಂದ ರಸ್ತೆ, ಕೃಷ್ಣರಾಜಪುರ-ವೈಟ್‍ಫೀಲ್ಡ್ (ಕಾಡುಗೋಡಿ) ನಡುವಿನ ರೈಲು ಸಂಚಾರವನ್ನು ಬೆಳಗ್ಗೆ 5ರಿಂದ 7 ಗಂಟೆವರೆಗೆ ಸ್ಥಗಿತಗೊಳಿಸಲಾಗುವುದು.

ಆದರೆ, ಸ್ವಾಮಿ ವಿವೇಕಾನಂದ ರಸ್ತೆ ನಿಲ್ದಾಣ ಮತ್ತು ಕೆಂಗೇರಿ ಹಾಗೂ ಕೃಷ್ಣರಾಜಪುರ ಮತ್ತು ವೈಟ್‍ಫೀಲ್ಡ್(ಕಾಡುಗೋಡಿ) ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸೇವೆಗಳು ಎಂದಿನಂತೆ ರಾತ್ರಿ 11ರವರೆಗೆ ಲಭ್ಯವಿರಲಿದೆ. ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಬೆಂಗಳೂರು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News