×
Ad

ಜೈಪುರ-ಮುಂಬೈ ಎಕ್ಸ್ ಪ್ರೆಸ್ ರೈಲಿನಲ್ಲಿ RPF ಕಾನ್ ಸ್ಟೆಬಲ್ ನಿಂದ ಹತ್ಯೆಗೀಡಾದ ಬೀದರ್‌ ನ ಸೈಫುದ್ದೀನ್ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ: ಸಚಿವ ಈಶ್ವರ್ ಖಂಡ್ರೆ

Update: 2023-08-02 18:50 IST

ಬೆಂಗಳೂರು: ಜೈಪುರ-ಮುಂಬೈ ಎಕ್ಸ್ ಪ್ರೆಸ್ ರೈಲಿನಲ್ಲಿ ಆರ್ ಪಿಎಫ್ ಕಾನ್ ಸ್ಟೆಬಲ್ ನಿಂದ ಹತ್ಯೆಗೀಡಾದ ಬೀದರ್‌ ನ ಸೈಫುದ್ದೀನ್ ಅವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡುವುದಾಗಿ  ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರಕಟಿಸಿದ್ದಾರೆ. 

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ʼʼಚಲಿಸುತ್ತಿದ್ದ ಜೈಪುರ-ಮುಂಬೈ ಎಕ್ಸ್‌ಪ್ರೆಸ್ ರೈಲುಗಾಡಿಯಲ್ಲಿ RPF ಪೇದೆ ಚೇತನ್ ಸಿಂಗ್ ಕ್ಷುಲ್ಲಕ ಕಾರಣಕ್ಕೆ ನಡೆಸಿದ ಗುಂಡಿನ ದಾಳಿಗೆ ಬಲಿಯಾದ ಬೀದರ್ ಜಿಲ್ಲೆಯ ಬೀದರ್ ಗಾದಗಿ ಬಳಿಯ ಹಮಿಲಾಪುರದ ಪ್ರಯಾಣಿಕ ಸೈಯದ್ ಸೈಫುದ್ದೀನ್ ಕುಟುಂಬದವರಿಗೆ 10 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರದ ವತಿಯಿಂದ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಸಮ್ಮತಿಸಿದ್ದಾರೆ. ಮೃತರ ಕುಟುಂಬದವರಿಗೆ ನೋವು ಭರಿಸುವ ಶಕ್ತಿ ನೀಡಲಿ. ಈ ನೋವಿನ ಸಂದರ್ಭದಲ್ಲಿ ನಾವು ಅವರ ಜೊತೆಗೆ ಇರುತ್ತೇವೆʼʼ ಎಂದು ಹೇಳಿದ್ದಾರೆ. 

ಮಹಾರಾಷ್ಟ್ರದ ಪಾಲ್ಘರ್ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಸುರಕ್ಷತಾ ಪಡೆಯ (ಆರ್‌ಪಿಎಫ್‌) ಕಾನ್‌ಸ್ಟೆಬಲ್‌ ಚೇತನ್‌ ಕುಮಾರ್‌ ಚೌಧರಿ ಎಂಬಾತ  ಸೋಮವಾರ ಗುಂಡು ಹಾರಿಸಿ ಸಾಯಿಸಿದ ನಾಲ್ವರ ಪೈಕಿ ಸೈಫುದ್ದೀನ್ ಬೀದರ್ ಜಿಲ್ಲೆಯವರಾಗಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News