×
Ad

ಪ್ರಿಯಕರನ ಮೊಬೈಲ್ ನಲ್ಲಿ ಮಹಿಳೆಯರ 13 ಸಾವಿರ ನಗ್ನಚಿತ್ರ ಪತ್ತೆ ಮಾಡಿದ ಪ್ರೇಯಸಿ!

Update: 2023-11-30 11:44 IST

Photo: freepik

ಬೆಂಗಳೂರು: ಪ್ರಿಯಕರನ ಮೊಬೈಲ್ ಫೋನ್ ನ ಗ್ಯಾಲರಿ ತೆರೆದಾಗ ಸಹೋದ್ಯೋಗಿಗಳು, ಇತರ ಮಹಿಳೆಯರು ಮತ್ತು ತನ್ನ ನಗ್ನಚಿತ್ರ ಸೇರಿ 13 ಸಾವಿರ ನಗ್ನಚಿತ್ರಗಳು ಪತ್ತೆಯಾಗಿರುವ ಬಗ್ಗೆ ಪ್ರೇಯಸಿ ದೂರು ದಾಖಲಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬಿಪಿಓ ಉದ್ಯೋಗಿಯಾದ 22 ವರ್ಷದ ಮಹಿಳೆ ತನ್ವಿ (ಹೆಸರು ಬದಲಾಯಿಸಲಾಗಿದೆ) ತನ್ನ ಸಹೋದ್ಯೋಗಿಯಾದ ಪ್ರಿಯಕರನ ಜತೆ ಸಂಬಂಧ ಕಡಿದುಕೊಂಡು ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಿದ್ದಾಳೆ. ಜತೆಗೆ ಭವಿಷ್ಯದಲ್ಲಿ ತನ್ನ ಸಹೋದ್ಯೋಗಿಗಳಿಗೆ ಆಗಬಹುದಾದ ತೊಂದರೆಯಿಂದ ರಕ್ಷಿಸುವಂತೆ ಮನವಿ ಮಾಡಿದ್ದಾಳೆ.

ಬೆಳ್ಳಂದೂರಿನಲ್ಲಿರುವ ಬಿಪಿಓದ ಕಾನೂನು ವಿಭಾಗದ ಮುಖ್ಯಸ್ಥರಾದ ಅರ್ಚನಾ (ಹೆಸರು ಬದಲಿಸಲಾಗಿದೆ) ಈ ಸಂಬಂಧ ಆದಿತ್ಯ ಸಂತೋಷ್ (25) ಎಂಬಾತನ ವಿರುದ್ಧ ನವೆಂಬರ್ 23ರಂದು ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತನ್ವಿ ಹಾಗೂ ಸಂತೋಷ್ ನಾಲ್ಕು ತಿಂಗಳಿಂದ ಪ್ರೇಮಸಂಬಂಧ ಹೊಂದಿದ್ದರು ಎನ್ನಲಾಗಿದ್ದು, ಈತ ತನ್ನ ಮೊಬೈಲ್ ನಲ್ಲಿ ಇಬ್ಬರ ಆಪ್ತ ಕ್ಷಣಗಳನ್ನು ಸೆರೆ ಹಿಡಿದಿದ್ದಾನೆ ಎಂದು ತಿಳಿದುಬಂದಿದೆ. ಅವುಗಳನ್ನು ಡಿಲೀಟ್ ಮಾಡಲು ಬಯಸಿದ ಆಕೆ ಆತನ ಗಮನಕ್ಕೆ ಬಾರದೇ ಆತನ ಮೊಬೈಲ್ ತೆಗೆದುಕೊಂಡಿದ್ದಳು ಎಂದು ದೂರಿನಲ್ಲಿ ವಿವರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News