×
Ad

ಶಿವಮೊಗ್ಗ: ಅಪ್ರಾಪ್ತ‌ ವಯಸ್ಸಿನ ಮಗನಿಗೆ ಬೈಕ್ ಚಲಾಯಿಸಲು ಕೊಟ್ಟ ತಂದೆಗೆ 25 ಸಾವಿರ ರೂ. ದಂಡ

Update: 2023-09-07 22:53 IST

ಶಿವಮೊಗ್ಗ: ಅಪ್ರಾಪ್ತ ವಯಸ್ಸಿನ ಪುತ್ರನ ಕೈಗೆ ಬೈಕ್‌ ಕೊಟ್ಟಿದ್ದ ತಂದೆಗೆ ಶಿವಮೊಗ್ಗದ ನ್ಯಾಯಾಲಯ 25 ಸಾವಿರ ರೂ. ದಂಡ ವಿಧಿಸಿದೆ.

ಶಿವಮೊಗ್ಗದ ಅಶೋಕ ಹೊಟೇಲ್‌ ಬಳಿ ಪಶ್ಚಿಮ‌ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್‌ ಆಗಸ್ಟ್‌ 12ರಂದು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬಾಲಕನೊಬ್ಬ ಬೈಕ್‌ ಚಾಲಯಿಸುತ್ತಿರುವುದು ಪತ್ತೆಯಾಗಿದೆ. ಅಪ್ರಾಪ್ತನಿಗೆ ವಾಹನ ಚಲಾಯಿಸಲು ನೀಡಿದ್ದರಿಂದ ಆತನ ತಂದೆ ವಿರುದ್ಧ ಪಶ್ಚಿಮ ಸಂಚಾರಿ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಲಾಗಿತ್ತು.

ಈ ಸಂಬಂಧ 4ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಅಪ್ರಾಪ್ತನ ಕೈಗೆ ಬೈಕ್‌ ಚಲಾಯಿಸಲು ನೀಡಿದ ಕ್ಲಾರ್ಕ್‌ ಪೇಟೆಯ ಓಂ ಪ್ರಕಾಶ್‌ಗೆ 25 ಸಾವಿರ ರೂ. ದಂಡ ವಿಧಿಸಿದೆ ಎಂದು ಪೊಲೀಸ್‌ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News