ಕಲಬುರಗಿ ಪೊಲೀಸ್ ಕಮಿಷನರ್ ಹೆಸರಲ್ಲಿ 6 ನಕಲಿ ಫೇಸ್ ಬುಕ್ ಅಕೌಂಟ್!
Update: 2024-02-08 14:26 IST
ಕಲಬುರಗಿ, ಫೆ.8: ಕಲಬುರಗಿ ಪೊಲೀಸ್ ಕಮಿಷನರ್ ಚೇತನ್ ಆರ್. ಫೋಟೋ ಹೊಂದಿರುವ ಅವರ ಹೆಸರನಲ್ಲಿ ಆರು ಫೇಸ್ ಬುಕ್ ಖಾತೆಯನ್ನು ತೆರೆದಿರುವ ಕಿಡಿಗೇಡಿಗಳು ಸ್ನೇಹಿತರ ಬಳಿ ಹಣಕ್ಕಾಗಿ ಡಿಮ್ಯಾಂಡ್ ಮಾಡಿರುವ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿಡಿಗೇಡಿಗಳು ಬಹಳ ದಿನಗಳ ಹಿಂದೆ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಕೆಲವರಿಗೆ ಫ್ರೆಂಡ್ ರಿಕ್ವೇಸ್ಟ್ ಕಳುಹಿಸಿದ್ದಾರೆ. ಅದಲ್ಲದೆ ಪೊಲೀಸ್ ಆಯುಕ್ತರ ಕೆಲವು ಸ್ನೇಹಿತರಿಗೆ ಹಣದ ಬೇಡಿಕೆ ಕೂಡಾ ಇಟ್ಟಿದ್ದಾರೆ. ಪೊಲೀಸ್ ಕಮಿಷನರ್ ಫೇಸ್ ಬುಕನಲ್ಲಿ ಹಣದ ಬೇಡಿಕೆ ಇಟ್ಟಿರುವ ಅನುಮಾನಗೊಂಡ ಕೆಲವರು ಚೇತನ್ ಆರ್. ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಆಧರಿಸಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.