ರಾಜ್ಯದಲ್ಲಿ ಶೇ.95.20ರಷ್ಟು ʼಸಮೀಕ್ಷೆʼ ಪೂರ್ಣ
ಬೆಂಗಳೂರು, ಅ.17 : ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಒಟ್ಟು 1,41,04,331 ಮನೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ. ಇನ್ನು ಏಳು ಲಕ್ಷಕ್ಕೂ ಅಧಿಕ ಕುಟುಂಬಗಳ ಸಮೀಕ್ಷೆ ನಡೆಯಬೇಕಾಗಿದ್ದು, ಸಮೀಕ್ಷೆಯ ಮನೆಗಳ ಗುರಿ ಒಟ್ಟು 1,48,14,286 ಇದೆ.
ಬೆಂಗಳೂರು ಹೊರತುಪಡಿಸಿ ಶೇ.95.20ರಷ್ಟು ಸಮೀಕ್ಷೆ ಮುಗಿದಿದ್ದು, ಒಟ್ಟು 5,22,64,067 ಜನರ ಸಮೀಕ್ಷೆ ಪೂರ್ಣಗೊಂಡಿದೆ. ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ 17,20,560 ಮನೆಗಳ ಸಮೀಕ್ಷೆ ಮುಗಿದಿದ್ದು, ಶೇ.38.34 ಪ್ರಗತಿ ಕಂಡಿದೆ. ಬೆಂಗಳೂರಿನಲ್ಲಿ ಒಟ್ಟು 53,41,343 ಜನರ ಸಮೀಕ್ಷೆಯಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗವು ಮಾಹಿತಿ ನೀಡಿದೆ.
ನಾಳೆ ಕೊನೆಯ ದಿನ: ರಾಜ್ಯ ಸರಕಾರವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ಅ.18ರ ವರೆಗೆ ಅವಕಾಶ ನೀಡಲಾಗಿದ್ದು, ಇಂದು ಕೊನೆಯ ದಿನವಾಗಿದೆ. ಆದರೆ ರಾಜ್ಯದಲ್ಲಿ ಇನ್ನು ಶೇ.5ರಷ್ಟು ಮತ್ತು ಬೆಂಗಳೂರಿನಲ್ಲಿ ಶೇ.62ರಷ್ಟು ಸಮೀಕ್ಷೆ ಪೂರ್ಣವಾಗಬೇಕಿದ್ದು, ಸಮೀಕ್ಷೆ ಮಾಡಲು ದಿನಾಂಕ ವಿಸ್ತರಣೆಯಾಗುವ ಸಾಧ್ಯತೆ ಇದೆ.