×
Ad

ಹಾಸ್ಟೆಲ್ ನ ನೀರಿನ ತೊಟ್ಟಿ ಗೋಡೆ ಕುಸಿದು ಬಾಲಕ ಮೃತ್ಯು

Update: 2023-09-21 16:07 IST

ರಾಮನಗರ: ಹಾಸ್ಟೆಲ್ ನ ನೀರಿನ ತೊಟ್ಟಿ ಗೋಡೆ ಕುಸಿದು ಓರ್ವ ಬಾಲಕ ಮೃತಪಟ್ಟು, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ಎಚ್.ಗೊಲ್ಲಹಳ್ಳಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ವರದಿಯಾಗಿದೆ.

ಗೊಲ್ಲಹಳ್ಳಿ ಗ್ರಾಮದಲ್ಲಿರು ಮೊರಾರ್ಜಿ ವಸತಿ ಶಾಲೆಯಲ್ಲಿ ಘಟನೆ ನಡೆದಿದ್ದು 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕೌಶಿಕ್ ಮೃತಪಟ್ಟ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. 

ಹಾಸ್ಟೆಲ್ ಹೊರಗೆ ನೀರಿನ ಸಿಮೆಂಟ್ ತೊಟ್ಟಿ ನಿರ್ಮಾಣ ಮಾಡಲಾಗಿತ್ತು. ಈ ತೊಟ್ಟಿಗೆ ನಲ್ಲಿಗಳನ್ನ ಅಳವಡಿಸಲಾಗಿತ್ತು. ವಿದ್ಯಾರ್ಥಿಗಳು ಬೆಳಗ್ಗೆ ಮುಖ ತೊಳೆದುಕೊಳ್ಳಲು ತೊಟ್ಟಿಯ ಬಳಿ ಹೋಗಿದ್ದ ವೇಳೆ ತೊಟ್ಟಿ ಗೋಡೆ ವಿದ್ಯಾರ್ಥಿಗಳ ಮೇಲೆ ಉರುಳಿದೆ ಎಂದು ಹೇಳಲಾಗಿದೆ.

ಗೋಡೆಯ ಅವಶೇಷಗಳಡಿ ಸಿಲುಕಿದ್ದ ತೀವ್ರವಾಗಿ ಗಾಯಗೊಂಡಿದ್ದ ಕೌಶಿಕ್ ನನ್ನು ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾನೆ. ಮತ್ತೊಬ್ಬನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಿಡದಿ ಠಾಣೆ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News