×
Ad

ಮಂಡ್ಯ | ನಾಲೆಗೆ ಉರುಳಿ ಬಿದ್ದ ಕಾರು; ಮಗು ಸೇರಿ ಕಾರಿನಲ್ಲಿದ್ದ ಐದು ಮಂದಿ ನಾಪತ್ತೆ

Update: 2023-11-07 20:43 IST

ಮಂಡ್ಯ, ನ.7: ಪಾಂಡವಪುರ ತಾಲೂಕು ಬನಘಟ್ಟ ಬಳಿ ವಿಶ್ವೇಶ್ವರಯ್ಯ (ವಿಸಿ) ನಾಲೆಗೆ ಕಾರೊಂದು ಉರುಳಿಬಿದ್ದಿರುವ ಘಟನೆ ಮಂಗಳವಾರ ಸಂಜೆ ನಡೆದಿದ್ದು, ಮಗು ಸೇರಿ ಕಾರಿನಲ್ಲಿ ಐದು ಮಂದಿ ನಾಪತ್ತೆಯಾಗಿದ್ದಾರೆ.

ಕಾರು ಮೈಸೂರಿನಿಂದ ನಾಗಮಂಗಲ ಕಡೆಗೆ ತೆರಳುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿನಿಂದ ತುಂಬಿ ಹರಿಯುತ್ತಿದ್ದ ನಾಲೆಗೆ ಬಿದ್ದಿದೆ ಎಂದು ತಿಳಿದು ಬಂದಿದೆ.

ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಕಾರನ್ನು ನೀರಿನಿಂದ ಮೇಲೆತ್ತುವ ಕಾರ್ಯಾಚರಣೆ ಮುಂದುವರಿಸಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ಬರಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News