×
Ad

ಕೋವಿಡ್ ಸೋಂಕಿಗೆ ಚಾಮರಾಜಪೇಟೆಯಲ್ಲಿ ಓರ್ವ ವ್ಯಕ್ತಿ ಬಲಿ: ಸಚಿವ ದಿನೇಶ್ ಗುಂಡೂರಾವ್

Update: 2023-12-20 18:21 IST

ಬೆಂಗಳೂರು: ಕೋವಿಡ್ ಸೋಂಕಿಗೆ 64 ವರ್ಷದ ವ್ಯಕ್ತಿಯೊಬ್ಬರು  ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬುಧವಾರ ಕೇಂದ್ರ ಸಚಿವರು ನಡೆಸಿದ ವಿವಿಧ ಎಲ್ಲ ರಾಜ್ಯಗಳ ಆರೋಗ್ಯ ಸಚಿವರ ಸಭೆಯಲ್ಲಿ ವರ್ಚುಯಲ್ ಮೂಲಕ ಭಾಗವಹಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ  ಯ 64 ವರ್ಷದ ಪುರುಷರೊಬ್ಬರು ಅಸ್ತಮಾ, ಉಸಿರಾಟದ ಸಮಸ್ಯೆ, ಕ್ಷಯ ರೋಗದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಡಿ.15ರಂದು ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪರೀಕ್ಷೆ ನಡೆಸಿದಾಗ ಅವರಲ್ಲಿ ಕೋವಿಡ್ ಸೋಂಕು ಇರುವುದು ಪತ್ತೆಯಾಗಿದೆ. ಅವರಿಗೆ ರೂಪಾಂತರ ತಳಿ ಜೆಎನ್-1 ಸೋಂಕಿತ್ತೇ ಎನ್ನುವುದು ಇನ್ನೂ ಖಚಿತವಾಗಿಲ್ಲ ಎಂದು ಮಾಹಿತಿ ನೀಡಿದರು.

ಈವರೆಗಿನ ಮಾಹಿತಿಯ ಪ್ರಕಾರ, ಜೆಎನ್-1 ಸೋಂಕು ಮಾರಣಾಂತಿಕವಲ್ಲ ಎಂಬ ವರದಿ ಇದೆ ಎಂದ ಅವರು, ಕಳೆದ ಎರಡು ವಾರಗಳಲ್ಲಿ ದೇಶಾದ್ಯಂತ 16 ಸಾವುಗಳಾಗಿವೆ. ಕೇರಳದಲ್ಲಿ ನಿನ್ನೆವರೆಗೂ 5 ಮಂದಿ ಮೃತಪಟ್ಟಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News