×
Ad

ಗಣಪತಿ ಶೋಭಾಯಾತ್ರೆ ಸಿದ್ಧತೆ ವೇಳೆ ಅವಘಡ: ಕ್ರೇನ್ ಹರಿದು ಯುವಕ ಸ್ಥಳದಲ್ಲೇ ಮೃತ್ಯು

Update: 2023-10-11 22:20 IST

ದಾವಣಗೆರೆ: ಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಧ್ವಜಗಳನ್ನು ಕಟ್ಟುವಾಗ ತಲೆ ಮೇಲೆ ಕ್ರೇನ್ ಹರಿದ ಪರಿಣಾಮ ಸ್ಥಳದಲ್ಲಿಯೇ ಯುವಕ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ 7.30ರ ಸುಮಾರಿಗೆ ವರದಿಯಾಗಿದೆ. 

ಬಸವರಾಜಪೇಟೆ ನಿವಾಸಿ ಪೃಥ್ವಿರಾಜ್ (26) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.

ಇಲ್ಲಿನ ಪಿಬಿ ರಸ್ತೆಯ ರೇಣುಕಾಮಂದಿರದ ಬಳಿ ಶೋಭಾಯಾತ್ರೆ ಹಿನ್ನಲೆಯಲ್ಲಿ ಕೇಸರಿ ಧ್ವಜಗಳನ್ನು ಕಟ್ಟಲು ಕ್ರೇನ್ ಹಿಂದೆ ನಿಂತಿದ್ದ ಪೃಥ್ವಿರಾಜ್ ನನ್ನು ಗಮನಿಸದೆ ಚಾಲಕ ಕ್ರೇನ್ ಹಿಂದಕ್ಕೆ  ಚಾಲಾಯಿಸಿದ್ದಾನೆ. ಈ ವೇಳೆ ತಲೆ ಮೇಲೆ ಕ್ರೇನ್ ಹರಿದು  ಸ್ಥಳದಲ್ಲೇ ಮೃತ್ತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಮೃತದೇಹವನ್ನು ಜಿಲ್ಲಾ ಆಸ್ಪತ್ರೆಗೆ ಪೊಲೀಸರು ರವಾನಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News