×
Ad

ಕಚೇರಿ ಸಮಯದಲ್ಲಿ ಅನುಮತಿ ಪಡೆಯದೆ ಕಾಫಿ, ಚಹಾಗೆ ತೆರಳುವ ಸಿಬ್ಬಂದಿ ವಿರುದ್ಧ ಕ್ರಮ: ಕಂದಾಯ ಇಲಾಖೆ ಎಚ್ಚರಿಕೆ

Update: 2023-09-16 21:01 IST

ಬೆಂಗಳೂರು, ಸೆ. 16: ‘ಕಂದಾಯ ಇಲಾಖೆ ಎಲ್ಲ ನೌಕರರು ಪ್ರತಿದಿನ ಬೆಳಗ್ಗೆ 10:30ರೊಳಗಾಗಿ ಕಡ್ಡಾಯವಾಗಿ ಕಚೇರಿಯಲ್ಲಿ ಹಾಜರಿರಬೇಕು. ಸಂಜೆ ಕಚೇರಿಯಿಂದ ತೆರಳುವ ವೇಳೆ ತಮ್ಮ ಶಾಖೆಯ ಸಂಬಂಧಪಟ್ಟ ಜಂಟಿ/ಉಪಕಾರ್ಯದರ್ಶಿ ಅನುಮತಿ ಪಡೆದು ತೆರಳಬೇಕು’ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದಶಿ ರಾಜೇಂದರ್ ಕುಮಾರ್ ಕಟಾರಿಯಾ ಸೂಚನೆ ನೀಡಿದ್ದಾರೆ.

ಶನಿವಾರ ಈ ಸಂಬಂಧ ಆದೇಶ ಹೊರಡಿಸಿರುವ ಅವರು, ‘ಮೇಲ್ಕಂಡ ಸೂಚನೆಗಳನ್ನು ಇಲಾಖೆ ಎಲ್ಲ ನೌಕರರು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲವಾದರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. ಕಚೇರಿ ವೇಳೆಯಲ್ಲಿ ಸಿಬ್ಬಂದಿ ಶಾಖೆಯಲ್ಲಿ ಹಾಜರಿಲ್ಲದೆ ಗಂಟೆ ಗಟ್ಟಲೆ ಕಾಫಿ, ಟೀ, ಉಪಹಾರಕ್ಕೆಂದು ತೆರಳುವುದು, ಸಂತೆ ಬೀದಿಯಲ್ಲಿ ಓಡಾಡುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ನೌಕರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.


 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News