×
Ad

'ನಂದಿನಿ' ಉತ್ಪನ್ನಗಳಿಗೆ ನಟ ಶಿವರಾಜ್​ಕುಮಾರ್ ರಾಯಭಾರಿ

Update: 2023-08-01 15:17 IST

ಬೆಂಗಳೂರು: ‘ನಂದಿನಿ’ ಹಾಲಿನ ಉತ್ಪನ್ನಗಳ ರಾಯಭಾರಿಯಾಗಿ ನಟ ಶಿವರಾಜ್​​​​​​​ಕುಮಾರ್ ನೇಮಕವಾಗಿದ್ದಾರೆ.

ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಹಾಗೂ ಎಂಡಿ ಜಗದೀಶ್ ಅವರ ಮನವಿಗೆ ಸ್ಪಂದಿಸಿದ ಶಿವರಾಜ್​​​​​​​ಕುಮಾರ್ ರಾಯಭಾರಿಯಾಗಲು ಒಪ್ಪಿಕೊಂಡಿದ್ದಾರೆ.

ಈ ಹಿಂದೆ ದಿವಂಗತ ಪುನೀತ್ ರಾಜಕುಮಾರ್ ಕೆಎಮ್ಎಫ್ ರಾಯಭಾರಿಯಾಗಿದ್ದರು. ಇದೀಗ ಶಿವರಾಜ್​​​​​​​ಕುಮಾರ್ ನಂದಿನಿ ಹಾಲಿನ ಉತ್ಪನ್ನಗಳ ರಾಯಭಾರಿಯಾಗಿ ನೇಮಕವಾಗಿದ್ದಾರೆ. ನಂದಿನಿ ಹಾಲಿನ ರಾಯಭಾರಿಯಾಗಿ ನೇಮಕಗೊಂಡ ನಟ ಶಿವರಾಜ್ ಕುಮಾರ್ ಅವರಿಗೆ ಅಧ್ಯಕ್ಷ ಭೀಮಾನಾಯಕ್ ಹೂಗುಚ್ಚ ನೀಡಿ ಅಭಿನಂದಿಸಿದ್ದಾರೆ.

''ಸ್ಯಾಂಡಲ್ ವುಡ್ ನಟ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ ಕುಮಾರ್ ರವರನ್ನು "ನಂದಿನಿ" ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಒಪ್ಪಿಕೊಂಡಿರುವ ಕರುನಾಡ ಚಕ್ರವರ್ತಿಗೆ ಕೆ.ಎಂ.ಎಫ್ ಮತ್ತು ಸಮಸ್ತ ಕರ್ನಾಟಕ ರೈತರ ಹಾಗೂ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು'' ಎಂದು ಭೀಮಾನಾಯಕ್ ಟ್ವೀಟ್ ಮಾಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News