×
Ad

ನಂದಿನಿ ಬ್ರಾಂಡ್‍ನ ಹೊಸ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಿದ ನಟ ಶಿವರಾಜ್ ಕುಮಾರ್

Update: 2023-12-21 23:24 IST

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್)ದ ‘ನಂದಿನಿ’ ಬ್ರಾಂಡ್‍ನ ಹೊಸ ಉತ್ಪನ್ನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ನಂದಿನಿ ಉತ್ಪನ್ನಗಳ ನೂತನ ರಾಯಭಾರಿ, ನಟ ಶಿವರಾಜ್ ಕುಮಾರ್ ಅವರು ಲೋಕಾರ್ಪಣೆ ಮಾಡಿದರು.

ಗುರುವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸರಳ ಸಮಾರಂಭದಲ್ಲಿ ನೂತನ ಉತ್ಪನ್ನಗಳ ಬಿಡುಗಡೆ ಬಳಿಕ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್, ‘ರಾಜ್ಯದಲ್ಲಿ ಸದ್ಯಕ್ಕೆ ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡುವುದಿಲ್ಲ. ಈ ಕುರಿತ ಪ್ರಸ್ತಾವ ನಮ್ಮ ಮುಂದಿಲ್ಲ’ ಎಂದು ಸ್ಪಷ್ಟಣೆ ನೀಡಿದರು.

‘ಬಹಳ ಹಿಂದಿನಿಂದಲೂ ಡಾ.ರಾಜ್‍ಕುಮಾರ್ ಕುಟುಂಬದವರನ್ನೇ ನಂದಿನಿ ರಾಯಭಾರಿಯನ್ನಾಗಿ ಮಾಡಲಾಗುತ್ತಿದೆ. ನಟ ಪುನೀತ್ ರಾಜ್‍ಕುಮಾರ್ ನಂದಿನಿ ರಾಯಭಾರಿ ಆಗಿದ್ದರು. ಇದೀಗ ಶಿವ ರಾಜ್‍ಕುಮಾರ್ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದ್ದೇವೆ. ನಮ್ಮ ಮನವಿಗೆ ಸ್ಪಂದಿಸಿ ಒಪ್ಪಿಕೊಂಡಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವ ರಾಜ್‍ಕುಮಾರ್ ಅವರನ್ನು ಸನ್ಮಾನಿಸಿದರು ಎಂದು ತಿಳಿಸಿದರು.

‘ನಂದಿನಿ’ಯ ಮೂರು ಹೊಸ ಉತ್ಪನ್ನಗಳ ಲೋಕಾರ್ಪಣೆ ಮಾಡಿದ್ದು, ಎಮ್ಮೆಯ ಮೊಸರನ್ನು ಮಾರಾಟ ಮಾಡಲು ತೀರ್ಮಾನಿಸಿದ್ದೇವೆ. ಆಗಸ್ಟ್ 1ರಂದು ನಂದಿನಿ ಹಾಲಿ ದರ ಲೀಟರ್ ಗೆ 3ರೂ.ಹೆಚ್ಚಳ ಮಾಡಿದ್ದೇವೆ. ಅದನ್ನು ನೇರವಾಗಿ ರೈತರಿಗೆ ಕೊಟ್ಟಿದ್ದೇವೆ ಎಂದು ಅವರು ತಿಳಿಸಿದರು.

ನಟ ಶಿವ ರಾಜ್‍ಕುಮಾರ್ ಮಾತನಾಡಿ, ‘ನಂದಿನಿ ಉತ್ಪನ್ನಗಳು ಬಹಳ ಚೆನ್ನಾಗಿವೆ. ಹೊಸ ಉತ್ಪನ್ನ ಬಿಡುಗಡೆಯ ಟೀಸರ್ ಬಿಡುಗಡೆಯಾಗಿದೆ. ಇನ್ನು, ಕೆಸಿಸಿಯಲ್ಲಿ ಪಾಲ್ಗೊಳ್ಳಲು ಸಿಎಂಗೆ ಆಹ್ವಾನ ನೀಡಿದ್ದೇನೆ. ಕ್ರಿಸ್ಮಸ್ ಹಬ್ಬದ ದಿನ ಬರುವುದಕ್ಕೆ ಆಹ್ವಾನ ನೀಡಿದ್ದೇನೆ ಎಂದು ವಿವರಣೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News