ಸಿದ್ದರಾಮಯ್ಯ ಬಳಿಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ : ಶಾಸಕ ಬಾಲಕೃಷ್ಣ
Update: 2025-01-13 20:13 IST
ಬಾಲಕೃಷ್ಣ
ಬೆಂಗಳೂರು : ಸಿದ್ದರಾಮಯ್ಯ ಬಳಿಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ. ಸಿದ್ದರಾಮಯ್ಯ ಬಳಿಕ ಡಿಸಿಎಂ ಅವರು ಸಿಎಂ ಆಗಬೇಕಲ್ಲವೇ ಎಂದು ಶಾಸಕ ಮಾಗಡಿ ಬಾಲಕೃಷ್ಣ ತಿಳಿಸಿದ್ದಾರೆ.
ಸೋಮವಾರ ನಗರದ ಕ್ವೀನ್ಸ್ ರಸ್ತೆಯ ಇಂದಿರಾಗಾಂಧಿ ಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆ ಚರ್ಚೆ ವಿಚಾರವಾಗಿ ಶಾಸಕರು ಚರ್ಚೆ ಮಾಡುತ್ತಿಲ್ಲ, ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ ಎಂದರು.
ಸಾಮಾನ್ಯವಾಗಿ ಡಿಸಿಎಂ ಅವರು ಸಿಎಂ ಆಗಬೇಕಲ್ಲವೇ ಎಂದ ಅವರು, ಬೇರೆ ಬೇರೆಯವರೂ ಇದ್ದಾರೆ. ಆದರೆ, ಅಂತಿಮವಾಗಿ ಹೈಕಮಾಂಡ್ ನಾಯಕರು ನಿರ್ಧಾರ ಮಾಡುತ್ತಾರೆ ಎಂದರು.