×
Ad

ಬಜೆಟ್ ಮಂಡನೆ ವೇಳೆ ಸದನದ ಆಸನದಲ್ಲಿ ಕುಳಿತಿದ್ದ ಅನಾಮಿಕ ವ್ಯಕ್ತಿ!

Update: 2023-07-07 17:41 IST

ಬೆಂಗಳೂರು: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಮಂಡನೆ ವೇಳೆ ವಿಧಾನಸಭೆ ಪ್ರವೇಶ ಮಾಡಿರುವ ಅನಾಮಿಕ ವ್ಯಕ್ತಿ ಸುಮಾರು ಹದಿನೈದು ನಿಮಿಷಗಳ ಕಾಲ ಸದನದಲ್ಲಿ ಕುಳಿತುಕೊಂಡಿದ್ದಾರೆ ಎಂದು ಶಾಸಕ ಶರಣಗೌಡ ಕಂದಕೂರು ಆರೋಪಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಜೆಟ್ ಮಂಡನೆ ಸಮಯದಲ್ಲಿ ಯಾರೋ ಒಬ್ಬ ಖಾಸಗಿ ವ್ಯಕ್ತಿ ಬಂದು ಸದನದ ಆಸನದಲ್ಲಿ ಕುಳಿತಿದ್ದರು. ನಾನು ಪಕ್ಕದಲ್ಲಿ ಜಿ.ಟಿ ಹರೀಶ್​ ಗೌಡ ಅವರ ಬಳಿ ಕೇಳಿದಾಗ, ಅವರು ಯಾರೋ ಗೊತ್ತಿಲ್ಲ ಎಂದು ಹೇಳಿದರು. ಮಾರ್ಷಲ್ ಗಳ ಬಳಿ ಮೊಳಕಾಲ್ಮೂರು ಶಾಸಕ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿ  ಸುಮಾರು ಹದಿನೈದು ನಿಮಿಷಗಳ ಕಾಲ ಸದನದಲ್ಲಿ ಕುಳಿತಿದ್ದರು. ಇದೊಂದು ಭದ್ರತಾ ಲೋಪ ಅನ್ನಬೇಕೋ ಹೇಗೆ..?.ಈ ಬಗ್ಗೆ ಸ್ಪೀಕರ್ ಗಮನಕ್ಕೆ ತಂದಿದ್ದೆನೆ' ಎಂದು ಹೇಳಿದರು. 

ಇನ್ನು ಆ ವ್ಯಕ್ತಿ ಹೇಗೆ ಸದನದೊಳಗೆ ಪ್ರವೇಶಿಸಿದ್ದ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಅಲ್ಲದೇ ಆತಂಕಕ್ಕೂ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News