×
Ad

ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ವಿಧೇಯಕಕ್ಕೆ ಅನುಮೋದನೆ

Update: 2023-07-21 00:21 IST

ಬೆಂಗಳೂರು, ಜು.20: 2023-24ನೆ ಸಾಲಿನ ರಾಜ್ಯ ಬಜೆಟ್‍ನಲ್ಲಿ ಉಲ್ಲೇಖಿಸಿರುವಂತೆ ‘ಸರಕು ವಾಹನಗಳಿಗೆ ಪೂರ್ಣಾವಧಿ ತೆರಿಗೆ ಪರಿಷ್ಕರಿಸುವ 2023ನೆ ಸಾಲಿನ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ವಿಧೇಯಕ’ಕ್ಕೆ ಗುರುವಾರ ವಿಧಾನಸಭೆಯಲ್ಲಿ ಅನುಮೋದನೆ ದೊರೆಯಿತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧೇಯಕವನ್ನು ಮಂಡಿಸಿದರು.

ಸರಕುವಾಹನಗಳ ಒಟ್ಟಾರೆ ತೂಕವು 1500 ಕಿ.ಗ್ರಾಂ.ಗಳಿಂದ 12 ಸಾವಿರ ಕಿ.ಗ್ರಾಂ. ಮೀರದಂತೆ, ವಾಹನವನ್ನು ಬಾಡಿಗೆಗಾಗಿ ಅಥವಾ ಪ್ರತಿಫಲಕ್ಕಾಗಿ ಬಳಸುತ್ತಿರಲಿ ಅಥವಾ ಬಳಸದಿರಲಿ, ಅಂತಹ ಸರಕು ವಾಹನಗಳಿಗೆ ವಿಧಿಸುವ ಪೂರ್ಣಾವಧಿ ತೆರಿಗೆ ಪರಿಷ್ಕರಣೆ ಮಾಡಲು ಸರಕಾರ ನಿರ್ಧರಿಸಿದೆ.

ಹೊಸ ವಾಹನಗಳ ನೋಂದಣಿ ಸಮಯದಲ್ಲಿ ಸರಕು ವಾಹನಗಳ ಒಟ್ಟಾರೆ ತೂಕವು 1500-2000 ಕಿ.ಗ್ರಾಂ.ಮೀರದಿದ್ದರೆ ಅವುಗಳಿಗೆ 20 ಸಾವಿರ ರೂ.(ಈ ಹಿಂದೆ 10 ಸಾವಿರ ರೂ.ಇತ್ತು), 2000 ಕಿ.ಗ್ರಾಂ.ನಿಂದ 3000 ಕಿ.ಗ್ರಾಂ.ಮೀರದಿದ್ದರೆ 30 ಸಾವಿರ ರೂ.(ಈ ಹಿಂದೆ 15 ಸಾವಿರ ರೂ.ಇತ್ತು), 3000 ಕಿ.ಗ್ರಾಂ.ನಿಂದ 5500 ಕಿ.ಗ್ರಾಂ.ಮೀರದಿದ್ದರೆ 40 ಸಾವಿರ ರೂ.(ಈ ಹಿಂದೆ 20 ಸಾವಿರ ರೂ.ಇತ್ತು)ಪೂರ್ಣಾವಧಿ ತೆರಿಗೆ ಪಾವತಿಸಬೇಕು.

500 ಕಿ.ಗ್ರಾಂ.ನಿಂದ 7500 ಕಿ.ಗ್ರಾಂ.ಮೀರದಿದ್ದರೆ 60 ಸಾವಿರ ರೂ., 7500 ಕಿ.ಗ್ರಾಂ.ನಿಂದ 9500 ಕಿ.ಗ್ರಾಂ.ಮೀರದಿದ್ದರೆ 80 ಸಾವಿರ ರೂ., 9500 ಕಿ.ಗ್ರಾಂ.ನಿಂದ 12 ಸಾವಿರ ಕಿ.ಗ್ರಾಂ.ಮೀರದಿದ್ದರೆ ಒಂದು ಲಕ್ಷ ರೂ. ಪೂರ್ಣಾವಧಿ ತೆರಿಗೆ ಪಾವತಿಸಬೇಕು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News