×
Ad

ಅರ್ನಬ್ ಗೋಸ್ವಾಮಿಗೆ ಕಾಂಗ್ರೆಸ್ ಸಚಿವ ಶುಭಕೋರಿದ ಪೋಸ್ಟರ್ ವೈರಲ್!

Update: 2023-09-23 00:02 IST

ಬೆಂಗಳೂರು : ಅತ್ತ ದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷ ಮುಂಚೂಣಿಯಲ್ಲಿರುವ ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಸೇರಿದಂತೆ 14 ಟಿ ವಿ ಆಂಕರ್ಗಳನ್ನು ಬಹಿಷ್ಕರಿಸುತ್ತೇವೆ, ಅವರ ಕಾರ್ಯಕ್ರಮದಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಹೇಳಿರುವ ಬೆನ್ನಿಗೆ ಕರ್ನಾಟಕ ಸರ್ಕಾರದ ಸಚಿವರ ಫೋಟೋದೊಂದಿಗೆ ಅರ್ನಬ್ ಗೋಸ್ವಾಮಿಯ ದೊಡ್ಡ ಫೊಟೋ ಹಾಕಿ ಶುಭ ಹಾರೈಸಿದ್ದಾರೆ ಎನ್ನಲಾದ ಪೋಸ್ಟರ್ ವೈರಲ್ ಆಗಿದೆ.

ಕರ್ನಾಟಕ ಕಾಂಗ್ರೆಸ್ ಸರಕಾರ ಮೀನುಗಾರಿಕೆ, ಬಂದರು, ಒಳನಾಡು ಇಲಾಖೆ ಸಚಿವ ಮಂಕಾಳು ಎಸ್. ವೈದ್ಯ ಅವರ ಫೊಟೋ ಹಾಗೂ ಅರ್ನಾಬ್ ಗೋಸ್ವಾಮಿಯ ದೊಡ್ಡ ಫೊಟೋ ಇರುವ ಚಿತ್ರ ಪೋಸ್ಟರ್ ನಲ್ಲಿದೆ. “ರಾಜ್ಯದಲ್ಲಿ ರಿಪಬ್ಲಿಕ್ ಕನ್ನಡ ಹೊಸ ಚಾನೆಲ್ ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸ ತಂದಿದೆ. ವಿನೂತನವಾಗಿ ಪ್ರಸಾರವಾಗುತ್ತಿರುವ ಕನ್ನಡದ ಹೆಮ್ಮೆಯ ಚಾನೆಲ್ ಆಗಿ ಹೊರಹೊಮ್ಮಲಿ. ನಾಡಿನ ಅಭಿವೃದ್ಧಿ, ಬಡವರ ನೋವು ನಲಿವುಗಳಿಗೆ ರಿಪಬ್ಲಿಕ್ ಕನ್ನಡ ಧ್ವನಿಯಾಗಲಿ ಎಂದು ಆಶಿಸುತ್ತೇನೆ” ಎಂದು ಮಂಕಾಳು ಎಸ್ ವೈದ್ಯ ಅವರು ಶುಭ ಹಾರೈಸಿದ್ದಾರೆ ಎಂದು ಬರೆಯಲಾದ ಪೋಸ್ಟರನ್ನು ವಿನ್ಯಾಸಗೊಳಿಸಲಾಗಿದೆ.

ಸಾಮಾಜಿಕ ಜಾಲತಾಣದ ಸಚಿವರ ಯಾವುದೇ ಖಾತೆಗಳಲ್ಲಿ ಪೋಸ್ಟರ್, ಪೋಸ್ಟ್ ಆಗಿರುವ ಪುರಾವೆಯಿಲ್ಲ. ವಾಟ್ಸಪ್ ಮೂಲಕ ಈ ಪೋಸ್ಟ್ ಹರಿದಾಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಮಂಕಾಳು ಎಸ್ ವೈದ್ಯ ಅವರ ಮಾಧ್ಯಮ ಸಲಹೆಗಾರರ ತಂಡ, ಈ ರೀತಿಯ ಯಾವುದೇ ಪೋಸ್ಟರ್ ನಾವು ಮಾಡಿರುವುದಿಲ್ಲ. ಕಿಡಿಗೇಡಿಗಳು ಪೋಸ್ಟರ್ ಮಾಡಿ ವೈರಲ್ ಮಾಡಿದ್ದಾರೆ. ವಿಚಾರಣೆ ಮಾಡುತ್ತಿದೇವೆ, ಇದರ ಮೂಲವನ್ನು ಪತ್ತೆಹಚ್ಚುತ್ತೇವೆ ಎಂದು ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News