×
Ad

ಇಡೀ ದೇಶದಲ್ಲಿ ವಿಫಲ ವಿರೋಧ ಪಕ್ಷ ಕರ್ನಾಟಕ ಬಿಜೆಪಿ : ಎ.ಎಸ್.ಪೊನ್ನಣ್ಣ

Update: 2025-11-20 20:10 IST

ಎ.ಎಸ್.ಪೊನ್ನಣ್ಣ

ಬೆಂಗಳೂರು : ಇಡೀ ದೇಶದಲ್ಲಿಯೇ ವಿಫಲ ಆಗಿರುವ ವಿರೋಧ ಪಕ್ಷ ಎಂದರೆ ಅದು ಕರ್ನಾಟಕದಲ್ಲಿರುವ ಬಿಜೆಪಿ ಪಕ್ಷ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಂಪೂರ್ಣವಾಗಿ ವಿಫಲವಾಗಿರುವ ವಿಪಕ್ಷ ಈ ದೇಶದಲ್ಲಿ ಇದ್ದರೆ ಅದು ಕರ್ನಾಟಕದ ಬಿಜೆಪಿ ಮಾತ್ರ. ಹೀಗಾಗಿ, ಸರಕಾರದ ಬಗ್ಗೆ ಅವರಿಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಟೀಕಿಸಿದರು.

ಈಗ ಮಾತನಾಡುವ ಬಿಜೆಪಿಯ ಎಲ್ಲ ನಾಯಕರು ಈ ಹಿಂದೆ ಅವರದ್ದೇ ಸರಕಾರ ಇದ್ದ ಸಂದರ್ಭದಲ್ಲಿ ಹಗರಣಗಳಲ್ಲಿ ಮುಳುಗಿ, ಭ್ರಷ್ಟಾಚಾರ ಮಾಡಿ ಜೈಲು ವಾಸ ಅನುಭವಿಸಿರುವ ಕೀರ್ತಿ ಹೊಂದಿದ್ದಾರೆ. ಹೀಗಾಗಿ, ಜನರಿಗೆ ಬಿಜೆಪಿ ನಾಯಕರ ಸತ್ಯ ಗೊತ್ತಿದೆ. ಆದರೆ, ರಾಜಕೀಯ ಲಾಭಕ್ಕಾಗಿ ಉದ್ದೇಶ ಪೂರಕವಾಗಿ ಸರಕಾರವನ್ನು ಟೀಕಿಸುವ ಕೆಲಸ ಬಿಡಬೇಕು ಎಂದು ಅವರು ಹೇಳಿದರು.

ಸಚಿವ ಸಂಪುಟ ವಿಸ್ತರಣೆ ವೇಳೆ ಕೊಡಗಿಗೆ ಸಚಿವ ಸ್ಥಾನ ದೊರೆಯುವ ವಿಶ್ವಾಸ ಇದೆ. 2009ರಿಂದ ಸಚಿವ ಸ್ಥಾನ ಆ ಜಿಲ್ಲೆಗೆ ಸಿಕ್ಕಿಲ್ಲ. ಕೊಡಗು ಜಿಲ್ಲೆ ದೇಶಕ್ಕೆ ದೊಡ್ಡ ಕ್ರೀಡೆ ಸೇರಿ ಎಲ್ಲ ಕ್ಷೇತ್ರದಲ್ಲಿ ಕೊಡುಗೆ ಕೊಟ್ಟಿದೆ. ಅದನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಕೊಡಗಿಗೆ ಸಚಿವ ಸ್ಥಾನ ಕೊಡುವ ವಿಶ್ವಾಸ ಇದೆ ಎಂದು ಅವರು ತಿಳಿಸಿದರು.

(

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News