ಬೆಂಗಳೂರು| ರೈಲು ಚಲಿಸುತ್ತಿರುವಾಗ ಹಳಿ ಮೇಲೆ ಅಂಗಾತ ಮಲಗಿದ ಮಹಿಳೆ; ವಿಡಿಯೋ ವೈರಲ್
Update: 2023-08-29 18:21 IST
Screengrab: Twitter/@jsuryareddy
ಬೆಂಗಳೂರು: ಗೂಡ್ಸ್ ರೈಲೊಂದು ಹಾದು ಹೋಗುವಾಗ ಹಳಿಗಳ ಮೇಲೆ ಅಂಗಾತ ಮಲಗಿದ ಮಹಿಳೆಯೊಬ್ಬಳು ಯಾವುದೇ ರೀತಿಯಲ್ಲಿ ಗಾಯಗೊಳ್ಳದೆ ಅಪಾಯದಿಂದ ಪಾರಾದ ಘಟನೆ ಯಲಮಖನದ ರಾಜನಕುಂಟೆ ರೈಲ್ವೆ ನಿಲ್ದಾಣದ ಸಮೀಪ ನಡೆದಿದ್ದು ಈ ಘಟನೆಯ ವೀಡಿಯೋ ವೈರಲ್ ಆಗಿದೆ.
ರೈಲು ಹಳಿ ದಾಟುತ್ತಿದ್ದ ಮಹಿಳೆ ಗೂಡ್ಸ್ ರೈಲು ಬರುತ್ತಿದೆ ಎಂದು ತಿಳಿಯುತ್ತಲೇ ಹಳಿಗಳ ಮೇಲೆ ಮಲಗಿಬಿಟ್ಟಿದ್ದಾರೆ. ಅಚ್ಚರಿಯೆಂದರೆ ರೈಲು ಹಾದು ಹೋದ ನಂತರ ಆಕೆ ಎದ್ದು ಬಂದಿದ್ದಳು. ಆಗ ಅಲ್ಲಿದ್ದ ಇತರ ಮಹಿಳೆಯರು ತಕ್ಷಣ ಆಕೆಯ ಬಳಿ ಆಗಮಿಸಿ ಆಕೆಗೇನೂ ಆಗಿಲ್ಲ ಎಂದು ತಿಳಿದು ನಿಟ್ಟುಸಿರು ಬಿಟ್ಟರು.
ಈ ಘಟನೆಯ ವೀಡಿಯೋ ವೈರಲ್ ಆದ ನಂತರವಷ್ಟೇ ರೈಲ್ವೆ ಪೊಲೀಸರಿಗೆ ಅದರ ಬಗ್ಗೆ ತಿಳಿದು ಬಂತು.