×
Ad

ಬೆಂಗಳೂರು | ಅಡುಗೆ ಅನಿಲ‌ ಸೋರಿಕೆಯಿಂದ ಸ್ಫೋಟ: ನಾಲ್ವರಿಗೆ ಗಾಯ

Update: 2023-09-17 11:13 IST

ಬೆಂಗಳೂರು: ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿ, ನಾಲ್ವರು ಗಾಯಗೊಂಡಿರುವ ಘಟನೆ ನಗರದ ಮುನೇಕೊಳಲು ಬಳಿಯ ವಸಂತನಗರದಲ್ಲಿ ವರದಿಯಾಗಿದೆ. 

ರವಿವಾರ ಬೆಳಗ್ಗೆ 6:45ರ ಸುಮಾರಿಗೆ ಈ ಘಟನೆ ನಡೆದಿದೆ. ಮನೆಯಲ್ಲಿದ್ದ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಓರ್ವನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುತ್ತಿದ್ದಾರೆ. ಮೂಲತಃ ಚಾಮರಾಜನಗರದ ಕುಟುಂಬ, ಕಳೆದ 15 ವರ್ಷಗಳಿಂದ ವಸಂತನಗರದಲ್ಲಿ ವಾಸವಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News