×
Ad

‘ಉತ್ತರಕಾಶಿ ಸುರಂಗ’ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದ ಬೆಂಗಳೂರಿನ ಸ್ಕ್ವಾಡ್ರೋನ್ ಇನ್ಫ್ರಾ ಅಂಡ್ ಮೈನಿಂಗ್ ಪ್ರೈ.ಲಿ.

Update: 2023-11-22 20:53 IST

ಬೆಂಗಳೂರು: ಖನಿಜ ನಿಕ್ಷೇಪ ಅನ್ವೇಷಣೆ, ಗಣಿಗಾರಿಕೆ, ಸುರಂಗಮಾರ್ಗ ನಿರ್ಮಾಣ ಸಹಿತ ಮೂಲಸೌಕರ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರು ಮೂಲದ ಸ್ಕ್ವಾಡ್ರೋನ್ ಇನ್ಫ್ರಾ ಅಂಡ್ ಮೈನಿಂಗ್ ಪ್ರೈ. ಲಿ. ಉತ್ತರಕಾಶಿಯ ಸುರಂಗದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇರಿಕೊಂಡಿದೆ.

ಆರು ಕೌಶಲ್ಯ ಪೂರ್ಣ ಡ್ರೋನ್ ಪೈಲೆಟ್‌ ಗಳು ಮತ್ತು ಭೂ ತಾಂತ್ರಿಕ ಪರಿಣತರ ತಂಡ ಎರಡು ಉನ್ನತ ತಂತ್ರಜ್ಞಾನದ ಡ್ರೋನ್‌ ಗಳ ಕಾರ್ಯಾಚರಣೆ ಕೈಗೊಳ್ಳಲಿದ್ದು, ಇವುಗಳನ್ನು ಸಂಸ್ಥೆ ಘಟನಾ ಸ್ಥಳದಲ್ಲಿ ಬಳಸಲಾಗುತ್ತಿದೆ. ಈ ತಂಡ ಸುರಂಗದ ಒಳಗಡೆ ಡ್ರೋನ್‌ ಗಳನ್ನು ನಡೆಸುವ ಸಾಮಥ್ರ್ಯ ಹೊಂದಿದೆ ಎಂದು ತಿಳಿಸಲಾಗಿದೆ.

ನ.12ರಿಂದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಸಾಧ್ಯತೆಗಳನ್ನು ಮೌಲ್ಯೀಕರಿಸುವುದಲ್ಲದೆ, ಈ ಪ್ರದೇಶದ ಭೂಪಟವನ್ನು ರಚಿಸಲು ನೆರವಾಗಲಿದ್ದಾರೆ. ಭೂಗತ ಉಪಯೋಗಗಳಿಗೆ ಮತ್ತು ಸುಲಭವಾಗಿ ಸಂಪರ್ಕ ಸಾಧ್ಯವಾಗದ ದೂರದ ಸ್ಥಳಗಳಲ್ಲಿ ಮ್ಯಾಪ್ ಗಳನ್ನು ರಚಿಸಲು ಅಗತ್ಯವಾದ ಡ್ರೋನ್ ತಂತ್ರಜ್ಞಾನವನ್ನು ಸ್ಕ್ವಾಡ್ರೋನ್ ಇಲ್ಲಿ ಬಳಕೆಗೆ ತರಲಿದೆ.

ಸಿಲ್ಕ್ಯಾರ ಸುರಂಗ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಬಾರ್ಡರ್ ರೋಡ್ಸ್ ಆರ್ಗನೈಸೇಷನ್‌ ನ ಡಿಡಿಜಿ ಬ್ರಿಗೇಡಿಯರ್ ವಿಶಾಲ್‌ ವರ್ಮಾ ಅವರಿಂದ ರಕ್ಷಣಾ ಕಾರ್ಯಾಚರಣೆಯನ್ನು ಸೇರಿಕೊಳ್ಳುವಂತೆ ತುರ್ತು ಮನವಿ ಬಂದಿತ್ತು. ಈ ಸ್ಥಳದಲ್ಲಿರುವ ಸ್ಕ್ವಾಡ್ರೋನ್ ಅನ್ನು ಆನ್ಸೈಟ್ ತಂಡವು ಬೆಂಗಳೂರಿನಲ್ಲಿ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿರುವ ಸಂಸ್ಥೆಯ ಬದ್ಧತೆಯುಳ್ಳ ಬೆಂಬಲ ತಂಡದೊಂದಿಗೆ ಕೈಗೂಡಿಸಿ ಕೆಲಸ ಮಾಡಲಿದೆ.

ಈ ಸಹಯೋಗದ ಕಾರ್ಯವು ಪ್ರಮುಖವಾದ ಬೆಂಬಲ ಮತ್ತು ಸಮನ್ವಯವನ್ನು ಪೂರೈಸುವುದಲ್ಲದೆ, ವಿವರಗಳು ಮತ್ತು ಒಳನೋಟಗಳ ಸೀಮಾತೀತ ಸಮಗ್ರೀಕರಣದ ಖಾತ್ರಿ ಮಾಡಿಕೊಳ್ಳಲಿದೆ. ಭೂ ತಾಂತ್ರಿಕ ಮತ್ತು ರಕ್ಷಣಾ ಪರಿಹಾರ ತಂಡಗಳಿಗೆ ಕ್ಷಣ ಕ್ಷಣದ ಮಾಹಿತಿಯನ್ನು ಪೂರೈಸುವುದರೊಂದಿಗೆ ಈ ತಂಡ ರಕ್ಷಣಾ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News