ಚಳಿಗಾಲದ ಅಧಿವೇಶನ | ವಿಪಕ್ಷದ ಸದಸ್ಯರಿಂದ ಗದ್ದಲ ; ಕಲಾಪ ಮುಂದೂಡಿಕೆ
Update: 2024-12-09 13:49 IST
ಬೆಳಗಾವಿ : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ಮೊದಲ ದಿನವೇ ಸುರ್ವಣಸೌಧದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಗ್ಯುದ್ಧವೇ ಪ್ರಾರಂಭವಾಗಿದೆ.
ಕಲಾಪ ಆರಂಭವಾಗಿ ಕೆಲಹೊತ್ತಾಗುತ್ತಿದ್ದಂತೆಯೇ ವಕ್ಫ್ ವಿಚಾರವಾಗಿ ವಿಪಕ್ಷಗಳು ಚರ್ಚೆಗೆ ಪಟ್ಟು ಹಿಡಿದಿದ್ದು, , ಈ ವೇಳೆ ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ ನಡೆದಿದೆ. ಈ ಮಧ್ಯೆ ಪಂಚಮಸಾಲಿ ಮೀಸಲಾತಿ ಸಂಬಂಧ ಬೆಳಗಾವಿಗೆ ಬರುವ ಹೋರಾಟಗಾರರು ಮತ್ತು ಟ್ರಾಕ್ಟರ್ ತಡೆ ಹಿಡಿದಿದ್ದಕ್ಕೆ ಬಿಜೆಪಿ ಶಾಸಕರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿದರು.
ಈ ವೇಳೆ ಸದನದ ಬಾವಿಗಿಳಿದು ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ ಬೆಲ್ಲದ್ ಧರಣಿಗೆ ಮುಂದಾದರು. ಈ ಹಿನ್ನಲೆಯಲ್ಲಿ ಸದನದಲ್ಲಿ ತೀವ್ರ ಗದ್ದಲ ಉಂಟಾಯಿತು.
ಇದರಿಂದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಕಲಾಪವನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.