×
Ad

ಬೆಳಗಾವಿ: 4 ತಿಂಗಳ ಮಗುವನ್ನು ನೆಲಕ್ಕೆ ಎಸೆದು ಕೊಲೆ ಮಾಡಿದ ತಂದೆ

Update: 2023-09-20 20:29 IST

ಬಸಪ್ಪ ಬಾಳುಂಕಿ - ಆರೋಪಿ

ಬೆಳಗಾವಿ: ನಾಲ್ಕು ತಿಂಗಳ ತನ್ನ ಮಗುವನ್ನೇ ನೆಲಕ್ಕೆ ಎಸೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ವರದಿಯಾಗಿದೆ. 

ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಕೆಎಸ್‌ಐಎಸ್‌ಎಫ್​ ಕಾನ್ಸ್‌ ಟೆಬಲ್​ ಬಸಪ್ಪ ಬಾಳುಂಕಿ ಮಗುವನ್ನು ಕೊಂದ ಆರೋಪಿಯಾಗಿದ್ದು, ಈತ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕೆಲಸಕ್ಕೆ ನಿಯೋಜನೆಗೊಂಡಿದ್ದ ಎಂದು ತಿಳಿದು ಬಂದಿದೆ.

ಸೆಪ್ಟೆಂಬರ್ 18 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

ʼʼಸೆಪ್ಟೆಂಬರ್ 18 ರಂದು ಚಿಂಚಲಿ ಗ್ರಾಮಕ್ಕೆ ಬಂದು ಅಲ್ಲಿ ಕುಟುಂಬಸ್ಥರ ಜೊತೆ ಜಗಳ ಮಾಡಿ, ಮಗುವನ್ನು ಹತ್ಯೆ ಮಾಡಿದ್ದಾನೆ. ಅಲ್ಲದೇ ಆತ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದʼʼ ಎಂದು ಆರೋಪಿ ಬಸಪ್ಪನ ಪತ್ನಿ ಲಕ್ಷ್ಮಿ ಹಾಗೂ ಅವರ ಪೋಷಕರು ಕುಡಚಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

 ಆರೋಪಿಯನು ಬಂಧಿಸಿರುವ ಕುಡಚಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News