×
Ad

ಬೆಳಗಾವಿ: ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಆರಂಭ

Update: 2023-12-06 20:50 IST

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಗರದ ಖಾಸಗಿ ಹೊಟೇಲ್ ನಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಆರಂಭವಾಗಿದೆ.

ಬೆಳಗಾವಿ-ಕೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ 'ಫೇರ್‍ಫೀಲ್ಡ್ ಮ್ಯಾಲಿಯಟ್ ಹೋಟೆಲ್' ನಲ್ಲಿ ಆರಂಭವಾಗಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಮುಖವಾಗಿ ವಿಪಕ್ಷಗಳ ಬಾಯಿಮುಚ್ಚಿಸಲು ತಯಾರಿ ಸಂಬಂಧ ಚರ್ಚಿಸಲಾಗಿದೆ.

ಸದನದಲ್ಲಿ ವಿರೋಧ ಪಕ್ಷಗಳ ಆರೋಪಕ್ಕೆ ಪ್ರತ್ಯುತ್ತರ ನೀಡಲು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ತೀರ್ಮಾನಿಸಲಾಗಿದ್ದು. ಕಾನೂನುಬದ್ದವಾಗಿ ಅಂಕಿ ಅಂಶಗಳ ಸಮೇತ ವಿಪಕ್ಷಗಳ ಆರೋಪಗಳಿಗೆ ಉತ್ತರ ನೀಡಲು ಎಂಟು ಮಂದಿ ಸಚಿವರ ತಂಡದ ಮೂಲಕ ತಂತ್ರಗಾರಿಕೆ ಹೆಣೆಯಲಾಗಿದೆ.

ಝಮೀರ್ ಅಹಮದ್ ಖಾನ್ ಹೇಳಿಕೆ ವಿಚಾರ, ಮಸೂದೆಗಳ ಮಂಡನೆ ವೇಳೆ ಕಡ್ಡಾಯ ಹಾಜರಾತಿ, ಬರ ಪರಿಹಾರಕ್ಕೆ ಉತ್ತರ ನೀಡುವ ಸಂದರ್ಬದಲ್ಲಿ ಸರ್ಕಾರವನ್ನು ಸಮರ್ಥನೆ ಮಾಡಿಕೊಳ್ಳುವುದು ಸೇರಿದಂತೆ ಹಲವು ವಿಚಾರಗಳ ಚರ್ಚೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News