×
Ad

ಬೆಂಗಳೂರು: ಸರಣಿ ಬೈಕ್‌ ಕಳ್ಳತನ; ಆರೋಪಿ ಪೊಲೀಸ್‌ ವಶಕ್ಕೆ

Update: 2023-12-16 15:26 IST

ಬೆಂಗಳೂರು: ದ್ವಿಚಕ್ರ ವಾಹನಗಳನ್ನು ಅಪಹರಿಸುತ್ತಿದ್ದ ವ್ಯಕ್ತಿಯನ್ನು  ಬಂಧಿಸಿದ ಪೊಲೀಸರು ಸುಮಾರು 10,00,000/- ರೂ. ಬೆಲೆ ಬಾಳುವ 10 ವಿವಿಧ ಬಗೆಯ ದ್ವಿಚಕ್ರ ವಾಹನಗಳು ಮತ್ತು 1 ಒನ್‌ಪ್ಲಸ್ ಮೊಬೈಲ್ ಪೋನ್ ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ತಮಿಳುನಾಡು ಮೂಲದ, ಪ್ರಸ್ತುತ ಕೆಂಗೇರಿಯ ಅಂಚೆಪಾಳ್ಯದಲ್ಲಿ ನೆಲೆಸಿರುವ  ರಮೇಶ ಬಿನ್ ರುದ್ರಪ್ಪ(23) ಎಂದು ಗುರುತಿಸಲಾಗಿದೆ.

ಕೆಂಚೇನಹಳ್ಳಿಯ ಮಹಿಳೆಯೊಬ್ಬರು ತಮ್ಮ ಮನೆ ಮುಂದೆ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನ ಕಳವಾಗಿರುವ ಬಗ್ಗೆ ರಾಜರಾಜೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.  ತನಿಖೆ ಕೈಗೊಂಡ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.

 ಕಾರ್ಯಾಚರಣೆಯಲ್ಲಿ   ಗಿರೀಶ್. ಎಸ್, ಐಪಿಎಸ್., ಉಪ ಪೊಲೀಸ್ ಆಯುಕ್ತರು, ಪಶ್ಚಿಮ ವಿಭಾಗ, ಬೆಂಗಳೂರು ನಗರ,  ಭರತ್.ಎಸ್.ರೆಡ್ಡಿ, ಸಹಾಯಕ ಪೊಲೀಸ್ ಆಯುಕ್ತರು, ಬ್ಯಾಟರಾಯನಪುರ ಉಪ ವಿಭಾಗ,  ಹಾಗೂ ರಾಜರಾಜೇಶ್ವರಿನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್, ಶ್ರೀ. ಶಿವಕುಮಾರ್ ಬಿ ಎಂ ಮತ್ತು ಅಧಿಕಾರಿ / ಸಿಬ್ಬಂದಿ  ಭಾಗಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News