×
Ad

ಬೆಂಗಳೂರು: ಗಂಭೀರ ಹಲ್ಲೆಗೊಳಗಾಗಿದ್ದ DMK ಮುಖಂಡ ವಿ.ಕೆ.ಗುರುಸ್ವಾಮಿ ಮೃತ್ಯು

Update: 2023-09-24 21:29 IST

ವಿ.ಕೆ ಗುರುಸ್ವಾಮಿ

ಬೆಂಗಳೂರು, ಸೆ.24: ಇಲ್ಲಿನ ಬಾಣಸವಾಡಿಯ ಹೋಟೆಲ್‍ವೊಂದರಲ್ಲಿ ಮಾರಣಾಂತಿಕವಾಗಿ ಹಲ್ಲೆಗೀಡಾಗಿದ್ದ ಡಿಎಂಕೆ ಪಕ್ಷದ ಮುಖಂಡ ವಿ.ಕೆ.ಗುರುಸ್ವಾಮಿ(55) ರವಿವಾರ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಸೆ.04ರಂದು ಬಾಣಸವಾಡಿಯ ಕಮ್ಮನಹಳ್ಳಿಯಲ್ಲಿರುವ ಸುಖಸಾಗರ್ ಹೋಟೆಲ್‍ನಲ್ಲಿ ಕುಳಿತಿದ್ದಾಗ ದುಷ್ರ್ಕಮಿಗಳು ವಿ.ಕೆ.ಗುರುಸ್ವಾಮಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಗುರುಸ್ವಾಮಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೆ.24ರಂದು ಚಿಕಿತ್ಸೆ ಫಲಕಾರಿಯಾಗದೇ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಹಳೇ ದ್ವೇಷದ ಹಿನ್ನೆಲೆಯಲ್ಲಿ ವಿ.ಕೆ.ಗುರುಸ್ವಾಮಿಯನ್ನು ಸೆ.4ರಂದು ತಮಿಳುನಾಡಿನಿಂದ ಹಿಂಬಾಲಿಸಿಕೊಂಡು ತಂಡವೊಂದು ಬಂದಿತ್ತು. ಲಿಟಿಗೇಷನ್ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ಗುರುಸ್ವಾಮಿ ಬೆಂಗಳೂರಿಗೆ ಬಂದಿದ್ದ. ಹೋಟೆಲ್‍ನಲ್ಲಿ ಬ್ರೋಕರ್ ಜತೆ ಮಾತನಾಡುತ್ತಿದ್ದಾಗ ದುಷ್ಕರ್ಮಿಗಳ ಗುಂಪು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News