×
Ad

ಸಂಸತ್‌ ಭದ್ರತಾ ವೈಫಲ್ಯ ಖಂಡಿಸಿ ಬಿಜೆಪಿ ಇದುವರೆಗೂ ಒಂದೇ ಒಂದು ಟ್ವೀಟ್ ಮಾಡಿಲ್ಲ: ಕಾಂಗ್ರೆಸ್‌ ಟೀಕೆ

Update: 2023-12-14 13:14 IST

 ಬೆಂಗಳೂರು: ಸಂಸತ್‌ ಭವನದಲ್ಲಿ ನಡೆದ ಭಾರೀ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ  ಬಿಜೆಪಿ ಪಕ್ಷ ಇದುವರೆಗೂ ಯಾವುದೇ ಖಂಡನೆಯನ್ನು ವ್ಯಕ್ತಪಡಿಸಿಲ್ಲ ಎಂದು ಕಾಂಗ್ರೆಸ್‌ ಕುಟುಕಿದೆ.

ಈ ಬಗ್ಗೆ ʼಎಕ್ಸ್‌ʼ ಬರೆದುಕೊಂಡಿರುವ ಕಾಂಗ್ರೆಸ್‌, ʼದೇಶವೇ ಬೆಚ್ಚಿಬೀಳುವಂತಹ ಘಟನೆ, ದೇಶದ ಭದ್ರತೆಯನ್ನು ಅಣಕಿಸುವಂತಹ ಘಟನೆ ಸಂಸತ್ತಿನಲ್ಲಿ ನಡೆದಿದೆ. ಇಡೀ ದೇಶವೇ ಸಂಸತ್ತಿನಲ್ಲಿ ನಡೆದ ಘಟನೆ ಬಗ್ಗೆ ಚರ್ಚಿಸುತ್ತಿದೆ. ಆದರೆ ಇದುವರೆಗೂ ಕನಿಷ್ಠ ಪಕ್ಷ ಘಟನೆಯನ್ನು ಖಂಡಿಸಿಯಾದರೂ  ಬಿಜೆಪಿ ʼಎಕ್ಸ್‌ʼ ನಲ್ಲಿ ಒಂದು ಟ್ವೀಟ್  ಮಾಡಿಲ್ಲಎಂದು ಕಾಂಗ್ರೆಸ್ ಟೀಕಿಸಿದೆ.

" ಇದು ವೈಫಲ್ಯವನ್ನು ಒಪ್ಪಿಕೊಳ್ಳುವ ಮೌನವೇ? ಅಥವಾ ಭಯೋತ್ಪಾದಕ ಚಟುವಟಿಕೆಯನ್ನು ಸಮರ್ಥಿಸುವ ಮೌನವೇ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News